Friday, January 15, 2021

30 ಕೋಟಿ ರೂಪಾಯಿ ಚಿನ್ನ ಕಳ್ಳ ಸಾಗಾಟ: ಐಎಎಸ್ ಅಧಿಕಾರಿ ಶಿವಶಂಕರ್ ವಿಚಾರಣೆ

ತಿರುವನಂತಪುರಂ: ಕೇರಳದಲ್ಲಿ ಕೋಲಾಹಲ ಸೃಷ್ಚಿಸಿರುವ 30 ಕೋಟಿ ರೂಪಾಯಿ ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಎಎಸ್ ಅಧಿಕಾರಿ  ಶಿವಶಂಕರ್ ಅವರನ್ನು ಕಸ್ಟಂಮ್ಸ್ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಗುರಿಪಡಿಸಿದ್ದಾರೆ.  ಸತತ 10 ಗಂಟೆಗಳ ವಿಚಾರಣೆ ಬಳಿಕ ಇಂದು ಮುಂಜಾನೆ  ಶಿವಶಂಕರ್ ಅವರನ್ನು  ಬಿಡುಗಡೆಮಾಡಲಾಗಿದೆ.

ಮಂಗಳವಾರ ಸಂಜೆ ಐದು ಗಂಟೆಗೆ ವಿಚಾರಣೆಗೆ ಹಾಜರಾದ ಶಿವಶಂಕರ್ ಅವರನ್ನು ಇಂದು ಮುಂಜಾನೆ 4 ಗಂಟೆ ತನಕ ವಿಚಾರಣೆಗೆ ಗುರಿಪಡಿಸಲಾಗಿದೆ. ಚಿನ್ನ ಕಳ್ಳ ಸಾಗಾಟದ ಆರೋಪಿಗಳಾದ ಸರಿತ್ ಮತ್ತು ಸ್ವಪ್ನಾ ಸುರೇಶ್ ಜತೆಗಿನ ಸಂಬಂಧದ ಬಗ್ಗೆ  ವಿಚಾರಣೆ ನಡೆಸಲಾಗಿದೆ.

ಆರೋಪಿಗಳ ಜತೆ ಶಿವಶಂಕರ್ ಗಂಟೆಗಟ್ಟಲೆ ಮಾತನಾಡಿರುವ ಬಗ್ಗೆ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಮತ್ತು ಮುಖ್ಯಮಂತ್ರಿ ಅವರ ಪ್ರಿನ್ಸಿಪಾಲ್ ಸೆಕ್ರಟರಿಯಾಗಿದ್ದ ಶಿವಶಂಕರ್, ಅವರನ್ನು ಇದೀಗ ಅಮಾನತು ಮಾಡಲಾಗಿದೆ.

ಈ ಮಧ್ಯೆ ಚಿನ್ನ ಕಳ್ಳ ಸಾಗಾಟ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಹಿರಿಯ ಪತ್ರಕರ್ತ ಹನುಮಂತ ಹೂಗಾರ ನಿಧನ

newsics.com ಹುಬ್ಬಳ್ಳಿ: 2020ನೇ ಸಾಲಿನ 'ಜೀವಮಾನ ಸಾಧನೆ' ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ (74)ಇಂದು ಮಧ್ಯಾಹ್ನ ನಿಧನರಾದರು. ಕಳೆದ ನಾಲ್ಕು ದಶಕಗಳಿಂದ ಹೆಚ್ಚು ಕಾಲ...

ಧಾರವಾಡ ಅಪಘಾತ: ಮೃತ ಯುವತಿಯರ ಶವ ಅದಲು-ಬದಲು

newsics.com ಧಾರವಾಡ: ಇಂದು(ಜ.15) ಧಾರವಾಡದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಜಿಲ್ಲಾಸ್ಪತ್ರೆಯಲ್ಲಿ ಅದಲುಬದಲು ಶವ ನೀಡಿದ ಘಟನೆ ನಡೆದಿದೆ. ಧಾರವಾಡದ ಇಟ್ಟಿಗಟ್ಟಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ 11 ಜನರಲ್ಲಿ ಅಸ್ಮಿತಾ,...

ಲತಾ ಮಂಗೇಶ್ಕರ್ ವಿರುದ್ಧ ವಿವಾದಾತ್ಮಕ ಟ್ವೀಟ್

newsics.com ಬೆಂಗಳೂರು: ಟ್ವಿಟರ್'ನಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್' ಬಗ್ಗೆ ವಿವಾದಿತ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. 'ಲತಾ ಮಂಗೇಶ್ಕರ್'ಗೆ ಒಳ್ಳೆಯ‌ ಧ್ವನಿಯಿದೆ ಎಂದು ನಂಬುವಂತೆ ಬ್ರೈನ್ ವಾಶ್ ಮಾಡಿದ್ದಾರೆ. ಸಂಗೀತ ಲೋಕದ ದಿಗ್ಗಜರು ಆಕೆಯನ್ನು ಪ್ರಶಂಸಿವುದು...
- Advertisement -
error: Content is protected !!