ನವದೆಹಲಿ: ನೀವು ಐಸ್ ಕ್ರೀಂನ್ನು ತುಂಬಾ ಇಷ್ಟ ಪಡುತ್ತೀರಾ…. ಹಾಗಿದ್ದರೆ ಇಲ್ಲಿದೆ ಒಂದು ಕಹಿ ಸುದ್ದಿ. ಮುಂದಿನ ಕೆಲವೇ ದಿನಗಳಲ್ಲಿ ಪ್ರತಿಷ್ಟಿತ ಬ್ರಾಂಡ್ ಗಳ ಐಸ್ ಕ್ರೀಂ ತುಟ್ಟಿಯಾಗಲಿದೆ. ಪ್ರಮುಖ ಹಾಲು ಉತ್ಪಾದನಾ ಡೇರಿಗಳು ಹಾಲಿನ ದರದಲ್ಲಿ ಹೆಚ್ಚಳ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ಐಸ್ ಕ್ರೀಂ ಗೆ ಮುಖ್ಯವಾಗಿ ಬಳಸಲಾಗುವ ಹಾಲಿನ ಹುಡಿ ದರದಲ್ಲಿ ಭಾರೀ ಹೆಚ್ಚಳವಾಗಿದೆ. ಇದರಿಂದಾಗಿ ಈ ಹೊರೆಯ ಸ್ವಲ್ಪ ಪಾಲನ್ನು ಗ್ರಾಹಕರಿಗೆ ವರ್ಗಾಯಿಸದೇ ಬೇರೆ ದಾರಿಯಿಲ್ಲ ಎಂಬುದು ಐಸ್ ಕ್ರೀಂ ಕಂಪನಿ ಮಾಲಿಕರ ವಾದ. ಎಲ್ಲದ್ದಕೂ ರೆಡಿಯಾಗಿ. ದರ ಹೆಚ್ಚಳಕ್ಕೆ ಮುನ್ನ ಐಸ್ ಕ್ರೀಂ ಬೇಕಿದ್ದರೆ ಇವತ್ತೇ ತಿಂದು ಬಿಡಿ.