newsics.com
ರಾಯ್ಪುರ: ಛತ್ತೀಸ್ ಘರ್ ಕಂಕೇರ್ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಪೋಟಿಸಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಜವಾನರೊಬ್ಬರು ಗಾಯಗೊಂಡಿದ್ದಾರೆ.
ಕಂಕೇರ್ ಜಿಲ್ಲೆಯ ಕೊಯಲಿಬೆಡಾ-ಧುತ್ತಾ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ 1.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೆಟ್ರೋಲಿಂಗ್ ತಂಡ ಕಾಡಿನಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ವೇಳೆ ಈ ಐಇಡಿ ಸಂಪರ್ಕಕ್ಕೆ ಬಂದಿರಬಹುದು ಎಂದು ಕಂಕೇರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋರಖನಾಥ್ ಬಾಗೆಲ್ ಹೇಳಿದ್ದಾರೆ.
ಸ್ಫೋಟದಲ್ಲಿ ಕಾನ್ಸ್ಟೆಬಲ್ ವೀರೇಂದ್ರ ತುದ್ದು ಎನ್ನುವವರಿಗೆ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯ್ಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.
ರಾಯ್ಪುರದಲ್ಲಿ ಐಇಡಿ ಸ್ಫೋಟ; ಗಾಯಗೊಂಡ ಬಿಎಸ್’ಎಫ್ ಯೋಧ
Follow Us