Friday, May 20, 2022

ನನಗೆ ಕೊರೋನಾ ಬಂದರೆ ಮಮತಾ ಬ್ಯಾನರ್ಜಿ ತಬ್ಬಿಕೊಳ್ಳುವೆ

Follow Us

newsics.com
ಕೊಲ್ಕತ್ತಾ: ನನಗೆ ಕೊರೋನಾ ಸೋಂಕು ತಗುಲಿದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ಹೇಳಿದ್ದಾರೆ.
ಕೊರೋನಾ ರೋಗಿಗಳ ಕುಟುಂಬಗಳ ನೋವು ಅವರಿಗೂ ಅರ್ಥ ಮಾಡಿಸುವ ನಿಟ್ಟಿನಲ್ಲಿ ತಾವು ಈ ರೀತಿ ಮಾಡುವುದಾಗಿ ಹಜ್ರಾ ಹೇಳಿದ್ದಾರೆ.
ದಕ್ಷಿಣ 24 ಪರಗಣದ ಬರುಯಿಪುರದಲ್ಲಿ ಭಾನುವಾರ ಸಂಜೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು, ಹಜ್ರಾ ಹೇಳಿಕೆ ವಿರುದ್ಧ ಟಿಎಂಸಿ ಸಿಲಿಗುರಿ ಪೊಲೀಸರಿಗೆ ದೂರು ನೀಡಿದೆ.
ನಮ್ಮ ಪಕ್ಷದ ಕಾರ್ಯಕರ್ತರು ಕೊರೋನಾಗಿಂತಲೂ ದೊಡ್ಡ ಶತ್ರುವಾಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ. ಒಂದು ವೇಳೆ ನನಗೆ ಕೊರೋನಾವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ -19 ರೋಗಿಗಳ ಶವಗಳನ್ನು ಅಂತ್ಯಕ್ರಿಯೆ ನಡೆಸುವ ರೀತಿ ಕರುಣಾಜನಕವಾಗಿದೆ. ಮೃತದೇಹಗಳನ್ನು ಸೀಮೆಎಣ್ಣೆಯಿಂದ ಸುಡಲಾಗುತ್ತಿದೆ. ಕೋವಿಡ್-19 ನಿಂದ ಮೃತಪಟ್ಟ ಪೋಷಕರ ಮುಖಗಳನ್ನು ಮಕ್ಕಳಿಗೆ ತೋರಿಸುತ್ತಿಲ್ಲ. ನಾವು ಸತ್ತ ಬೆಕ್ಕುಗಳು ಅಥವಾ ನಾಯಿಗಳನ್ನು ಸಹ ಆ ರೀತಿಯಲ್ಲಿ ಪರಿಗಣಿಸುವುದಿಲ್ಲ ಎಂದು ಹಜ್ರಾ ಹೇಳಿದ್ದಾರೆ.

ಐಸಿಸ್ ಉಗ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಎನ್ ಐ ಎ ಕೋರ್ಟ್

ಸೆಪ್ಟೆಂಬರ್ 30ರಂದು ಸುಪ್ರೀಂ ನಲ್ಲಿ ಕೃಷ್ಣ ಜನ್ಮ ಭೂಮಿ ವಿಚಾರಣೆ

‘ಭುವನದ ಭಾಗ್ಯ’ ಡಾ.ಜಿ.ಎಸ್. ಆಮೂರ ಇನ್ನಿಲ್ಲ

ಮೊರೋಟೊರಿಯಂ ಅವಧಿಯ ಸಾಲದ ಮೇಲಿನ ಬಡ್ಡಿ ವಸೂಲಿ: ವಿಚಾರಣೆ ಮುಂದೂಡಿಕೆ

ಮತ್ತಷ್ಟು ಸುದ್ದಿಗಳು

Latest News

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು...

ಮತ್ತೆ ಚಿನ್ನ, ಬೆಳ್ಳಿ ದುಬಾರಿ

newsics.com ಬೆಂಗಳೂರು: ಶುಕ್ರವಾರ (ಮೇ 20) ಚಿನ್ನ, ಬೆಳ್ಳಿ ಮತ್ತೆ ದುಬಾರಿಯಾಗಿದೆ. 10 ಗ್ರಾಂ ಚಿನ್ನಕ್ಕೆ 640 ರೂ. ಹೆಚ್ಚಳವಾಗಿದೆ. ಬೆಳ್ಳಿ 1 ಕೆಜಿಗೆ ಬರೋಬ್ಬರಿ 900 ರೂ. ಏರಿಕೆಯಾಗಿದೆ. ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ...

ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಸಾಧ್ಯತೆ

newsics.com ಬೆಂಗಳೂರು: ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ‌ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ನಾಗೇಶ್, ದ್ವಿತೀಯ ಪಿಯು...
- Advertisement -
error: Content is protected !!