Saturday, October 16, 2021

ಸಾಮಾಜಿಕ ಜಾಲ ತಾಣದಲ್ಲಿ ಟ್ರೆಂಡ್ ಸೃಷ್ಟಿಸಿರುವ ಸ್ನೇಹಾ ದುಬೆ

Follow Us

newsics.com

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಆರೋಪಗಳಿಗೆ ದಿಟ್ಟ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿ ಸ್ನೇಹಾ ದುಬೆಗೆ ಪ್ರಶಂಸೆಗಳ ಸುರಿಮಳೆ ಹರಿದು ಬಂದಿದೆ. ಸಾಮಾಜಿಕ ಜಾಲ ತಾಣದಲ್ಲಿ ಸ್ನೇಹಾ ದುಬೆ ಟ್ರೆಂಡ್ ಆಗಿದ್ದಾರೆ.

ಸ್ನೇಹಾ ದುಬೆ 2012ನೇ ಸಾಲಿನ ಐಎಫ್ ಎಸ್ ಅಧಿಕಾರಿ. ಗೋವಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಪುಣೆಯ ಫೆರ್ಗುಸನ್  ವಿಶ್ವವಿದ್ಯಾಲಯದಿಂದ ಎಂ ಫಿಲ್ ಪದವಿ ಪಡೆದಿದ್ದಾರೆ.

ಮ್ಯಾಡ್ರಿಡ್ ನಲ್ಲಿ ಈ ಹಿಂದೆ ಭಾರತದ ರಾಯಭಾರಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ವಿಶ್ವ ಸಂಸ್ಥೆಯಲ್ಲಿ ಭಾರತದ ಫಸ್ಟ್ ಸೆಕ್ರಟರಿ ಆಗಿದ್ದಾರೆ.

ಸ್ನೇಹಾ ದುಬೆ ಅವರ ತಂದೆ ಬಹು ರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮ್ಮ ಶಿಕ್ಷಕಿ. ಸ್ನೇಹಾ ದುಬೆ ಗಿಂತ ಮೊದಲು ಭಾರತದ ಈ ಹಿಂದಿನ ಪ್ರತಿನಿಧಿಗಳು ಕೂಡ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದರು.

ಭಾರತದ ಮೇಲಿನ ವಿಮಾನ ಪ್ರಯಾಣ ನಿರ್ಬಂಧ ರದ್ದುಪಡಿಸಿದ ಕೆನಡಾ

ಮತ್ತಷ್ಟು ಸುದ್ದಿಗಳು

Latest News

ಲಸಿಕೆ ನೀಡಲು ಅಪಾಯಕಾರಿ ಬಿದಿರಿನ ಸೇತುವೆ ದಾಟಿದ ಆರೋಗ್ಯ ಕಾರ್ಯಕರ್ತ: ವಿಡಿಯೋ ವೈರಲ್

newsics.com ಅರುಣಾಚಲ ಪ್ರದೇಶ: ಇಲ್ಲಿನ ಆರೋಗ್ಯ ಕಾರ್ಯಕರ್ತರೊಬ್ಬರು ಜನರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲು ಬಿದಿರಿನ ಸೇತುವೆ ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು...

ಕಾಂಗ್ರೆಸ್‌ ನಾಯಕನ ಕೊಲೆ: ಪತ್ನಿಯ ಸ್ಥಿತಿ ಗಂಭೀರ

newsics.com ಜಾರ್ಖಂಡ್‌: ಕಾಂಗ್ರೆಸ್ ನಾಯಕನನ್ನು ದುಷ್ಕರ್ಮಿಗಳ ತಂಡ ಹೊಡೆದು ಕೊಂದಿರುವ ಘಟನೆ ಜಾರ್ಖಂಡ್‌ ನ ರಾಮ್ ಗಢದಲ್ಲಿ ನಡೆದಿದೆ. ರಾಮ್ ಗಢ ಜಿಲ್ಲಾ ಕಾಂಗ್ರೆಸ್‌ ನ ಮಾಜಿ ಪ್ರಧಾನ ಕಾರ್ಯದರ್ಶಿ ಕಮಲೇಶ್‌ ನಾರಾಯಣ ಶರ್ಮಾ...

ಕೇರಳದಲ್ಲಿ ಭಾರೀ ಮಳೆಗೆ 3 ಸಾವು: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

newsics.com ಕೇರಳ: ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವರು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. 3 ಮಂದಿ ಸಾವನ್ನಪ್ಪಿದ್ದು, ಹಲವಾರು ನಾಪತ್ತೆಯಾಗಿದ್ದಾರೆ. ಭಾರತ ಹವಾಮಾನ ಇಲಾಖೆ ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್...
- Advertisement -
error: Content is protected !!