Saturday, November 28, 2020

‘ಇಗ್ನೋ’ದ ಡಿಸೆಂಬರ್ ಪರೀಕ್ಷೆಗಳು ಫೆಬ್ರವರಿಗೆ ಮುಂದೂಡಿಕೆ

newsics.com
ನವದೆಹಲಿ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೋ) ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು
2021 ರ ಫೆಬ್ರವರಿಗೆ ಮುಂದೂಡಿದೆ.
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಇಗ್ನೋ ಹೇಳಿದೆ. ಡಿಸೆಂಬರ್ ನಲ್ಲಿ ನಿಗದಿಯಾಗಿದ್ದ ವಿವಿಧ ಕೋರ್ಸ್ ಗಳ ಪರೀಕ್ಷೆಗಳನ್ನು ಫೆಬ್ರವರಿ 2021ರ ಮೊದಲ ವಾರದಲ್ಲಿ ನಡೆಸಲಾಗುವುದು. ವಿದ್ಯಾರ್ಥಿಗಳು ಡಿಸೆಂಬರ್ 15, 2020ರ ಒಳಗೆ ಪರೀಕ್ಷೆಗಾಗಿ ಅರ್ಜಿ, ಅಸೈನ್ ಮೆಂಟ್, ಪ್ರಾಜೆಕ್ಟ್ ವರ್ಕ್ ಸಲ್ಲಿಸುವಂತೆಯೂ ಸೂಚಿಸಿದೆ.
2020ರ ಅವಧಿಯ ಪರೀಕ್ಷೆ, ಜೂನ್ 2020 ರಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಮತ್ತು ಡಿಸೆಂಬರ್ 2020ರಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ನೋಂದಣಿಯ ಸಿಂಧುತ್ವವು 2020ರ ಡಿಸೆಂಬರ್ ನಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಅವರ ನೋಂದಣಿಯ ಸಿಂಧುತ್ವವನ್ನು ಒಂದು ಬಾರಿ ಜೂನ್ 2021ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದವರು 2020ರ ಡಿಸೆಂಬರ್ ಪರೀಕ್ಷೆಯಲ್ಲಿ ಹಾಜರಾಗಲು ಪ್ರತಿ ಕೋರ್ಸ್ ಗೆ 150 ರೂ ಶುಲ್ಕ ಸಲ್ಲಿಸಿ, ಹಾಜರಾಗಲು ಅನುಮತಿಸಿದೆ. ಹೆಚ್ಚಿನ ಮಾಹಿತಿಯನ್ನು www.ignou.ac.in ಜಾಲತಾಣದಲ್ಲಿ ಪಡೆಯುವಂತೆ ಇಗ್ನೋ ಸೂಚಿಸಿದೆ.

2022ರ ವೇಳೆಗೆ NISAR ಉಡಾವಣೆಗೆ ನಾಸಾ-ಇಸ್ರೋ ನಿರ್ಧಾರ

ನಾಳೆ ಸಪ್ತಪದಿ ತುಳಿಯಲಿರುವ ನಟಿ ಕಾಜಲ್ ಅಗರ್ವಾಲ್

ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಇನ್ನಿಲ್ಲ

ತಮಿಳುನಾಡಿನಲ್ಲಿ ಹಿಂಗಾರು ಮಳೆ ಅಬ್ಬರ: ಚೆನ್ನೈನಲ್ಲಿ ಪ್ರವಾಹ

ಮತ್ತಷ್ಟು ಸುದ್ದಿಗಳು

Latest News

ಸಿಎಂ ಬಿಎಸ್ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ದಾಖಲು

newsics.com ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಶುಕ್ರವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂತೋಷ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಬೆಂಗಳೂರಿನ ಎಮ್.ಎಸ್....

ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಹತ್ಯೆ

newsics.com ಟೆಹ್ರಾನ್: ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಹ್ ಅವರನ್ನು ಶುಕ್ರವಾರ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.ಟೆಹ್ರಾನ್‌ನ ಸಮೀಪ ಈ ಹತ್ಯೆ ನಡೆದಿದೆ ಎಂದು ಇಸ್ರೇಲ್‌ನ...

ಮುಂಬೈನಲ್ಲಿ ದಾರಿ ತಪ್ಪಿದ್ದ ಸಚಿನ್ ತೆಂಡೂಲ್ಕರ್!

newsics.com ಬೆಂಗಳೂರು: ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಮುಂಬೈನಲ್ಲಿ ದಾರಿ ತಪ್ಪಿದ್ದರಂತೆ. ಆಗ ಆಟೋವಾಲಾ ಒಬ್ಬರು ನೆರವಿಗೆ ಬಂದಿದ್ದರಿಂದ ಮನೆ ತಲುಪಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.ಈ ವರ್ಷದ ಜನವರಿಯಲ್ಲಿ...
- Advertisement -
error: Content is protected !!