ನವದೆಹಲಿ: ಶಬರಿಮಲೆ ಪ್ರವೇಶಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಹಾಗೂ ಈಗ ಪೋಸ್ಕೋ ಪ್ರಕರಣದ ಅಡಿಯಲ್ಲಿ ಆರೋಪಿಯಾಗಿರುವ ಕೇರಳದ ವಿವಾದಿತ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ.ರೆಹಾನಾ ಫಾತಿಮಾ ಅರೆನಗ್ನ ದೇಹದ ಮೇಲೆ ಇಬ್ಬರು ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರೆಹಾನಾ ಅವರ ಈ ವರ್ತನೆ ಪ್ರಶ್ನಿಸಿ ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ರೆಹಾನಾ ಪಾತಿಮಾ ಮೇಲೆ ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ರೆಹಾನಾ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ್ದ ಕೇರಳ ಹೈಕೋರ್ಟ್ ಪೋಸ್ಕೊ ಅಡಿಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಜಾಮೀನು ನಿರಾಕರಿಸಿತ್ತು. ಈ ಆದೇಶ ಪ್ರಶ್ನಿಸಿ ರೆಹಾನಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಜೀವನದ ಮೂಲಭೂತ ಹಕ್ಕು ಸ್ವಾತಂತ್ರ್ಯ ಮತ್ತು ಘನತೆಯನ್ನು ಉಲ್ಲಂಘಿಸಿರುವ ತನ್ನ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಪ್ರಕರಣಕ್ಕೆ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಆದೇಶ ವನ್ನು ಫಾತಿಮಾ ಸುಪ್ರೀಂಕೋರ್ಟ್’ನಲ್ಲಿ ಪ್ರಶ್ನಿಸಿದ್ದಾರೆ.
ಮಗಳ ಪೋಟೋ ಜತೆ ಪಾಲಕರಿಗೆ ಟಿಪ್ಸ್ ಕೊಟ್ರು ಮಮ್ಮಿ ರಾಧಿಕಾ
ಅಪ್ರಾಪ್ತ ವಯಸ್ಸಿನ ಮಕ್ಕಳ ಎದುರು ಬೆತ್ತಲಾಗಿ ಮಲಗಿದ್ದ ರೆಹಾನಾ ಫಾತಿಮಾ ಮಕ್ಕಳಿಗೆ ತನ್ನ ಮೈಮೇಲೆ ಚಿತ್ರ ಬಿಡಿಸುವಂತೆ ಸೂಚಿಸಿದ್ದರು. ಈ ದೃಶ್ಯಗಳು ಬಾಡಿ ಆ್ಯಂಡ್ ಪಾಲಿಟಿಕ್ಸ್ ಹೆಸರಿನಲ್ಲಿ ಎಲ್ಲೆಡೆ ವೈರಲ್ ಆಗಿತ್ತು.
ಈ ಹಿಂದೆ 2018ರಲ್ಲಿ ಸುಪ್ರೀಂ ಕೋರ್ಟ್ ಶಬರಿಮಲೆಗೆ ಸ್ತ್ರೀಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಬಳಿಕ ಶಬರಿಮಲೆ ಪ್ರವೇಶಿಸಲು ಮುಂದಾಗಿ ಜನರ ಆಕ್ರೋಶಕ್ಕೆ ತುತ್ತಾಗಿದ್ದರು.