newsics.com
ನವದೆಹಲಿ: ಕಳೆದ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ಚೀನಾದಿಂದ ಆಮದು ಪ್ರಮಾಣ ಶೇ.27ರಷ್ಟು ಕುಸಿತವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನಲ್ಲಿ ತಿಳಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಚಾವ್ಲಾ ಲೋಕಸಭೆಗೆ ಈ ಮಾಹಿತಿ ನೀಡಿದ್ದು, ಜುಲೈನಲ್ಲಿ 5.58 ಬಿಲಿಯನ್ ಡಾಲರ್, ಆಗಸ್ಟ್ ನಲ್ಲಿ 4.98 ಬಿಲಿಯನ್ ಡಾಲರ್’ನಷ್ಟು ಮೌಲ್ಯದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ.27.63 ರಷ್ಟು ಚೀನಾದಿಂದ ಆಮದು ಕಡಿಮೆಯಾಗಿದೆ. ದೇಶದ ರಫ್ತು ಪ್ರಮಾಣ ಪುನರುಜ್ಜೀವನಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಲಡಾಖ್ ಗಡಿ ಪ್ರದೇಶದಲ್ಲಿ ಚೀನಾ ಭಾರತದೊಂದಿಗೆ ಪದೇ ಪದೇ ತಕರಾರು ತೆಗೆದು ಯುದ್ಧದ ಸನ್ನಿವೇಶ ಸೃಷ್ಠಿಸುತ್ತಿರುವುದು ಚೀನಾದಿಂದ ಆಮದು ಪ್ರಮಾಣ ಕಡಿಮೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಪಾಕ್ ನಂಟು!