newsics.com
ಮುಂಬೈ: ಹೊರಗಿನಿಂದ ಅವಕಾಶ ಗಿಟ್ಟಿಸಿಕೊಳ್ಳಲು ಬರುವ ಹುಡುಗಿಯರನ್ನು ಬಾಲಿವುಡ್‍ನಲ್ಲಿ zಲೈಂಗಿಕಾರ್ಯಕರ್ತೆಯರಂತೆ ನೋಡಲಾಗುತ್ತದೆ. ಇದು ಬಾಲಿವುಡ್ ಅಲ್ಲ ಬುಲ್ಲಿವುಡ್ ಎನ್ನುವ ಮೂಲಕ ನಟಿ ಕಂಗನಾ ಮತ್ತೊಮ್ಮೆ ಬಾಲಿವುಡ್ ವಿರುದ್ಧ ಕಿಡಿಕಾರಿದ್ದಾರೆ.
ನಟ,ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಅನುರಾಗ್ ಕಶ್ಯಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕಂಗನಾ, ನನಗೆ ಗೊತ್ತಿರುವಂತೆ ಅನುರಾಗ್ ಎರಡೆರಡು ಮದುವೆಯಾಗಿದ್ದರೂ ಹೆಂಡತಿಯರೊಂದಿಗೆ ನ್ಯಾಯವಾಗಿ ಇರಲಿಲ್ಲ. ಅವರು ಪಾಯಲ್ ಜೊತೆ ಹೇಗೆ ನಡೆದುಕೊಂಡಿದ್ದಾರೋ ಅದು ಬಾಲಿವುಡ್‍ನಲ್ಲಿ ಕಾಮನ್ ಆಗಿದೆ.
ಹೊರಗಿನಿಂದ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಬಾಲಿವುಡ್‍ಗೆ ಬರುವ ಹೆಣ್ಣುಮಕ್ಕಳನ್ನು ಇಲ್ಲಿ ಲೈಂಗಿಕ ಕಾರ್ಯಕರ್ತೆಯರಂತೆ ನೋಡುವ ಪ್ರವೃತ್ತಿ ಬಾಲಿವುಡ್‍ನಲ್ಲಿ ಬೆಳೆದು ಬಂದಿದೆ ಎಂದಿರುವ ಕಂಗನಾ ಈ ಟ್ವೀಟ್‍ಗೆ ಅನುರಾಗ್ ಕಶ್ಯಪರನ್ನು ಟ್ಯಾಗ್ ಮಾಡಿದ್ದಾರೆ.
ಪ್ಯಾಂಟಲ್ ಪ್ರೌಡಕ್ಷನ್ ಹೌಸ್ ಬಗ್ಗೆಯೂ ಪ್ರಸ್ತಾಪಿಸಿರುವ ಕಂಗನಾ, ಅಲ್ಲಿಯೂ ಕೆಲವರು ಮೀಟೂ ಆರೋಪಕ್ಕೆ ಗುರಿಯಾಗಿದ್ದರು. ಬಳಿಕ ಅವರನ್ನು ಬಚಾವ್ ಮಾಡಲಾಗಿದೆ. ಈಗ ಅನುರಾಗ್ ಕಶ್ಯಪ್ ಸರದಿ. ಅವರು ಈಗ ಫಾಯಲ್‍ಗೆ ಮಾಡಿರುವಂತೆ ಇನ್ನು ಹಲವರಿಗೆ ಮಾಡಿದ್ದಾರೆ ಎಂಬುದನ್ನು ಕಂಗನಾ ಉಲ್ಲೇಖಿಸಿದ್ದಾರೆ.
ಮೊನ್ನೆಯಷ್ಟೇ ಕಂಗನಾ ಬಾಲಿವುಡ್ ನಲ್ಲಿ 8 ಬಗೆಯ ಉಗ್ರವಾದ ಇದೆ ಎಂದು ಆರೋಪಿಸಿದ್ದರು.
ಬಾಲಿವುಡ್’ನಲ್ಲಿ ಹೆಣ್ಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರಂತೆ ನೋಡ್ತಾರೆ…
Follow Us