newsics.com
ನವದೆಹಲಿ: ಮದ್ಯ ಸೇವಿಸಿದ ಬಳಿಕ ಪ್ರಯಾಣಿಕರು ವಿಮಾನದಲ್ಲಿ ಅನುಚಿತವಾಗಿ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮದ್ಯಪಾನ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ವಿಮಾನದಲ್ಲಿ ಮದ್ಯ ಪೂರೈಸುವ ಸಂಬಂಧ ಹಲವು ಕಠಿಣ ಕ್ರಮಗಳ ಪಾಲನೆಗೆ ಸೂಚಿಸಲಾಗಿದೆ.
ವಿಮಾನ ಯಾನ ಸಿಬ್ಬಂದಿ ಯಾವುದೇ ಕಾರಣಕ್ಕೂ ಪ್ರಯಾಣಿಕರ ಇದು ಕೊನೆಯ ಡ್ರಿಂಕ್ಸ್ ಎಂಬ ಮನವಿ ಪುರಸ್ಕರಿಸಬಾರದು ಎಂದು ಸೂಚಿಸಲಾಗಿದೆ. ಪ್ರಯಾಣಿಕರು ವಿಮಾನ ಸಿಬ್ಬಂದಿ ನೀಡಿದ ಮದ್ಯ ಮಾತ್ರ ಸೇವಿಸಬೇಕು. ಅವರ ಬಳಿ ಇರುವ ಮದ್ಯ ಸೇವಿಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.
ಮದ್ಯ ಪಾನ ಮಾಡಿದ ಬಳಿಕ ಗಲಾಟೆ ಮಾಡಲು ಸಾಧ್ಯತೆ ಇರುವ ಪ್ರಯಾಣಿಕರ ಮೇಲೆ ಆರಂಭದಿಂದಲೇ ನಿಗಾ ವಹಿಸುವಂತೆ ಸೂಚಿಸಲಾಗಿದೆ.