Tuesday, December 6, 2022

ದಿನಗೂಲಿ ನೌಕರನಿಗೆ ಕೋಟಿ ರೂಪಾಯಿ ವಾವತಿಸಲು ಆದಾಯ ಇಲಾಖೆ ನೋಟಿಸ್

Follow Us

ಮುಂಬೈ:  ಮೂವತೈದು ವರ್ಷದ ಬಾಬು ಸಾಹೇಬ್ ದಿನಗೂಲಿ ನೌಕರ.  ಕೊಳಗೇರಿಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸ.  ಮುಂಬೈನ ಕಲ್ಯಾಣ್ ಸಮೀಪದ ಅಂಬಿವಿಲಿ ನಿವಾಸಿ. ಆದರೆ ಆತ ಎಲ್ಲರ ದೃಷ್ಟಿಯಲ್ಲಿ ಕೋಟ್ಯಾಧಿಪತಿ. ಆದಾಯ ತೆರಿಗೆ ಬಾಬು ಸಾಹೇಬ್ ಅಹಿರೆ ಗೆ ನೋಟಿಸ್ ಜಾರಿ ಮಾಡಿದ್ದು, 1 ಕೋಟಿ ರೂಪಾಯಿ ಪಾವತಿಸುವಂತೆ ಸೂಚಿಸಿದೆ. ದೇಶದಲ್ಲಿ ಹಣದ ಅಪಮೌಲ್ಯವಾದ ಸಂದರ್ಭದಲ್ಲಿ  2016 ನವೆಂಬರ್ ತಿಂಗಳಲ್ಲಿ ಬಾಬು ಸಾಹೇಬ್ ಅಕೌಂಟ್ ಗೆ  58 ಲಕ್ಷ ರೂಪಾಯಿ ಠೇವಣಿಯಾಗಿ ಬಂದಿತ್ತು ಎಂಬುದು ಆದಾಯ ತೆರಿಗೆ ಇಲಾಖೆ ವಾದ. ತಮ್ಮ ಜೀವನದಲ್ಲಿ ಇದುವರೆಗೂ 50 ಸಾವಿರ ರೂಪಾಯಿ ಒಟ್ಟಿಗೆ ನೋಡಿರದ ಬಾಬು ಸಾಹೇಬ್ ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಗಡಿ ವಿವಾದ: ಮಹಾರಾಷ್ಟ್ರದ ಲಾರಿಗಳಿಗೆ ಕಪ್ಪು ಮಸಿ, ಕಲ್ಲು ತೂರಾಟ

newsics.com ಬೆಳಗಾವಿ: ಗಡಿ ವಿವಾದ ಕೆದಕಿರುವ ಮಹಾರಾಷ್ಟ್ರದ ವಿರುದ್ಧ ಕನ್ನಡಿಗರ ಆಕ್ರೋಶ ಸ್ಫೋಟಗೊಂಡಿದೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ನೋಂದಣಿ ಹೊಂದಿರುವ ವಾಹನಗಳಿಗೆ ಕಪ್ಪು ಮಸಿ...

ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿ ಮಾರಾಟ ಜಾಲ ಬಯಲು, ಐವರ ಬಂಧನ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದೇಶದ  ಪ್ರತಿಷ್ಟಿತ ವಿಶ್ವ ವಿದ್ಯಾಲಯಗಳ ನಕಲಿ ಅಂಕಪಟ್ಟಿ ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾ ಲಕ್ಮೀ ಲೇಔಟ್ ನ ಮನೆಯೊಂದರಲ್ಲಿ ...

20ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ ವ್ಯಕ್ತಿಯ ಹತ್ಯೆ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ. ಪಿ. ಅಗ್ರಹಾರದಲ್ಲಿ ಹತ್ಯೆಗೀಡಾದ ಯುವಕನ ಗುರುತು ಪತ್ತೆ ಹಚ್ಚಲಾಗಿದೆ. ಮೃತಪಟ್ಟ ವ್ಯಕ್ತಿಯನ್ನು  ಬಾಳಪ್ಪ ಜಮಖಂಡಿ ಎಂದು ಗುರುತಿಸಲಾಗಿದೆ. ಕಲ್ಲು ಎತ್ತಿ ಹಾಕಿ ಹತ್ಯೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ...
- Advertisement -
error: Content is protected !!