Saturday, November 28, 2020

ಆದಾಯ ತೆರಿಗೆ ಪಾವತಿ; ಡಿ.31ರವರೆಗೆ ಗಡುವು ವಿಸ್ತರಣೆ

newsics.com
ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ 2019-20ನೇ ಹಣಕಾಸು ವರ್ಷದ ವೈಯಕ್ತಿಕ ತೆರಿಗೆದಾರರ ರಿಟರ್ನ್ಸ್ ಸಲ್ಲಿಸಲು ನೀಡಿದ್ದ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಈ ಮಾಹಿತಿ ನೀಡಿದೆ. ‘ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು (ಅಂದರೆ, ಈ ಅಧಿಸೂಚನೆಯ ಅವಧಿ ವಿಸ್ತರಣೆಗೂ ಮುನ್ನ) 2020ರ ಜುಲೈ 31ರ ಅನ್ವಯ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಗಳ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.
ಕರೋನಾ ವೈರಸ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಐಟಿಆರ್ ಸಲ್ಲಿಸಲು ನೀಡಿದ್ದ ಗಡುವನ್ನು 2020ರ ನವೆಂಬರ್ 30ರವರೆಗೆ ವಿಸ್ತರಿಸಿತ್ತು. ಈಗ ಮತ್ತೆ ಅವಧಿ ವಿಸ್ತರಿಸಿದೆ.
ತೆರಿಗೆದಾರರ ಖಾತೆಗಳಿಗೆ ಲೆಕ್ಕ ಪರಿಶೋಧನೆ ಮಾಡಬೇಕಾದರೆ ಐಟಿಆರ್ ಫೈಲಿಂಗ್ ಗಡುವನ್ನು 2021ರ ಜನವರಿ 31ರವರೆಗೆ ಎರಡು ತಿಂಗಳ ಕಾಲ ವಿಸ್ತರಿಸಲಾಗಿದೆ. ‘ತೆರಿಗೆದಾರರು (ಅವರ ಪಾಲುದಾರರು ಸೇರಿದಂತೆ) ತಮ್ಮ ಲೆಕ್ಕಪತ್ರಗಳ ಆಡಿಟ್ ಮಾಡಬೇಕಾದ (ಯಾರಿಗೆ ಈ ಅಧಿಸೂಚನೆಯ ಅವಧಿ ವಿಸ್ತರಣೆಯ ಮೊದಲು) ಅಕ್ಟೋಬರ್ 31, 2020ರ ಅನ್ವಯ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ದಿನಾಂಕವನ್ನು 2021ರ ಜನವರಿ 31ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಆಕರ್ಷಕ ರಂಗ ಇನ್ನಿಲ್ಲ; ಒಂದೇ ವಾರದಲ್ಲಿ ಸಕ್ರೆಬೈಲು ಬಿಡಾರದ 3 ಆನೆ ಸಾವು

ನಟ ಧನ್ವೀರ್‌ ಗೌಡ ವಿರುದ್ಧ ಎಫ್‌ಐಆರ್

ಈರುಳ್ಳಿ ದಾಸ್ತಾನು: ವ್ಯಾಪಾರಿಗಳಿಗೆ ಮಿತಿ ನಿಗದಿಪಡಿಸಿದ ಕೇಂದ್ರ

ಬರಾಕ್ ಒಬಾಮಾ ನಿಜವಾಗ್ಲೂ ಖಾಸಗಿ ಕಂಪನಿ ನೌಕರರಾ…?

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್’ಗೆ ಕೊರೋನಾ

ಕುಡಿಯುವ ನೀರು ದುರ್ಬಳಕೆ : 1 ಲಕ್ಷ ರೂ.ದಂಡ, 5 ವರ್ಷ ಜೈಲು ಶಿಕ್ಷೆ

ಶೇ.61 ರಷ್ಟು ಭಾರತೀಯರಿಗೆ ಕೊರೋನಾ ಲಸಿಕೆ ಬಗ್ಗೆಯೇ ಅನುಮಾನ- ಸಮೀಕ್ಷೆ

ಮತ್ತಷ್ಟು ಸುದ್ದಿಗಳು

Latest News

ಸಿಎಂ ಬಿಎಸ್ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ದಾಖಲು

newsics.com ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಶುಕ್ರವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂತೋಷ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಬೆಂಗಳೂರಿನ ಎಮ್.ಎಸ್....

ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಹತ್ಯೆ

newsics.com ಟೆಹ್ರಾನ್: ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಹ್ ಅವರನ್ನು ಶುಕ್ರವಾರ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.ಟೆಹ್ರಾನ್‌ನ ಸಮೀಪ ಈ ಹತ್ಯೆ ನಡೆದಿದೆ ಎಂದು ಇಸ್ರೇಲ್‌ನ...

ಮುಂಬೈನಲ್ಲಿ ದಾರಿ ತಪ್ಪಿದ್ದ ಸಚಿನ್ ತೆಂಡೂಲ್ಕರ್!

newsics.com ಬೆಂಗಳೂರು: ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಮುಂಬೈನಲ್ಲಿ ದಾರಿ ತಪ್ಪಿದ್ದರಂತೆ. ಆಗ ಆಟೋವಾಲಾ ಒಬ್ಬರು ನೆರವಿಗೆ ಬಂದಿದ್ದರಿಂದ ಮನೆ ತಲುಪಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.ಈ ವರ್ಷದ ಜನವರಿಯಲ್ಲಿ...
- Advertisement -
error: Content is protected !!