ಚೆನ್ನೈ: ಖ್ಯಾತ ತಮಿಳು ಚಿತ್ರ ನಟ ವಿಜಯ್ ಅವರ ಚೆನ್ನೈ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಜೆ ಸುಮಾರು 4.30ಕ್ಕೆ ಈ ದಾಳಿ ನಡೆದಿದೆ. ಸತತ ಐದು ಗಂಟೆಗಳ ಕಾಲ ವಿಜಯ್ ಅವರನ್ನು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇದೀಗ ವಿಜಯ್ ಅವರನ್ನು ಅವರ ನಿವಾಸಕ್ಕೆ ಕಳುಹಿಸಿಕೊಡಲಾಗಿದೆ. ಬೃಹತ್ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ವಿಜಯ್ ತಮ್ಮ ಚಿತ್ರಗಳಲ್ಲಿ ಕೇಂದ್ರ ಸರ್ಕಾರದ ತೀರ್ಮಾನಗಳನ್ನು ಬಲವಾಗಿ ವಿರೋಧಿಸಿದ್ದರು. ಮುಖ್ಯವಾಗಿ ಕರೆನ್ಸಿ ಅಪಮೌಲ್ಯವನ್ನು ಕೂಡ ತಮ್ಮದೇ ಶೈಲ್ಲಿಯಲ್ಲಿ ಲೇವಡಿ ಮಾಡಿ ವಿವಾದಕ್ಕೆ ಕೂಡ ಗುರಿಯಾಗಿದ್ದರು