ನವದೆಹಲಿ: ವಿಶ್ವದಲ್ಲಿ ನೆಲೆಸಲು ಯೋಗ್ಯವಾದ 25 ರಾಷ್ಟ್ರಗಳ ಪೈಕಿ ಭಾರತ ಸ್ಥಾನ ಪಡೆದುಕೊಂಡಿದೆ. ಆದರೆ, ಮಕ್ಕಳನ್ನು ಬೆಳೆಸಲು ಮತ್ತು ಮಹಿಳೆಯರಿಗೆ ಸೂಕ್ತವಾದ ದೇಶವಲ್ಲ ಎಂದು ಅಮೆರಿಕ ಮೂಲದ ಅಧ್ಯಯನವೊಂದು ತಿಳಿಸಿದೆ.
ಈ ಪಟ್ಟಿಯಲ್ಲಿ ಭಾರತ ಹೊರತುಪಡಿಸಿ ಚೀನಾ, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಅರಬ್ ಒಕ್ಕೂಟ ಸೇರಿ ನಾಲ್ಕು ಏಷಿಯಾ ದೇಶಗಳು ಸ್ಥಾನ ಪಡೆದುಕೊಂಡಿವೆ. ಕಳೆದ ವರ್ಷ ಭಾರತದ ಈ ಸರ್ವೆಯಲ್ಲಿ 27ನೇ ಸ್ಥಾನ ಪಡೆದುಕೊಂಡಿತ್ತು.
ಆದರೆ, ದೇಶದಲ್ಲಿ ಪ್ರತಿನಿತ್ಯ 46 ಮಕ್ಕಳನ್ನು ರಕ್ಷಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಬಿಡುಗಡೆಗೊಳಿಸಿದ ವರದಿ ಆಧರಿಸಿ, ಈ ಸರ್ವೆ, ಭಾರತ ಮಕ್ಕಳನ್ನು ಬೆಳೆಸಲು ಸೂಕ್ತ ದೇಶವಲ್ಲ ಎಂದು ಅಬಿಪ್ರಾಯಪಟ್ಟಿದೆ.