ಚೀನಾದಲ್ಲಿನ ವಿದೇಶಿ ಕಂಪನಿ ಸೆಳೆಯಲು ಭಾರತ ಸಿದ್ಧತೆ

ನವದೆಹಲಿ: ಚೀನಾದಿಂದ ಹೊರಬರುವ ಕಂಪನಿಗಳು ಭಾರತದಲ್ಲೇ ನೆಲೆಯೂರುವಂತಾಗಲು ಅಗತ್ಯ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
ಮೊದಲ ಹಂತವಾಗಿ ಭೂಮಿಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ವಿಷಯದಲ್ಲಿ ಯುರೋಪ್ ನ ಲಕ್ಸೆಂಬರ್ಗ್ ದೇಶದ ಮಾದರಿ ಅನುಸರಿಸುತ್ತಿದೆ. ಭಾರತವು ದೇಶದಾದ್ಯಂತ 11,40,611.259 ಎಕರೆ ಪ್ರದೇಶವನ್ನು ಗುರುತಿಸಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕೈಗಾರಿಕೆಗಳಿಗೆ ಮೀಸಲಿಟ್ಟಿರುವ 2,84,494.8967 ಎಕರೆ ಪ್ರದೇಶವೂ ಸೇರಿದೆ.
ರಾಜ್ಯ ಸರ್ಕಾರಗಳ ಜತೆ ಸಮನ್ವಯದಿಂದ ಕೆಲಸ ಮಾಡುತ್ತಿರುವ ಮೋದಿ ಸರ್ಕಾರ, ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತಿದೆ. ಸದ್ಯಕ್ಕಂತೂ ಹೂಡಿಕೆದಾರರು ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಲು ಉತ್ಸುಕರಾಗಿದ್ದಾರೆ.
ಎಲೆಕ್ಟಿಕಲ್, ಫಾರ್ಮಾಸ್ಯುಟಿಕಲ್ಸ್, ವೈದ್ಯಕೀಯ ಉಪಕರಣಗಳು, ಎಲೆಕ್ಟ್ರಾನಿಕ್ಸ್, ಹೆವಿ ಎಂಜಿನಿಯರಿಂಗ್, ಸೌರ ಸಲಕರಣೆಗಳು, ಫುಡ್ ಪ್ರೊಸೆಸಿಂಗ್, ಕೆಮಿಕಲ್ಸ್ ಮತ್ತು ಟೆಕ್ಸ್ ಟೈಲ್ಸ್- ಇವು ಉತ್ಪಾದನಾ ವಲಯವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಜಪಾನ್, ಯು.ಎಸ್., ದಕ್ಷಿಣ ಕೊರಿಯಾದ ಕಂಪೆನಿಗಳ ಜತೆಗೆ ಅದು ಸಂಪರ್ಕದಲ್ಲಿದೆ. ಉತ್ತರಪ್ರದೇಶ ಕೂಡ ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಭೂಮಿಯನ್ನು ವಿತರಿಸಲು ಆನ್ ಲೈನ್ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ.

LEAVE A REPLY

Please enter your comment!
Please enter your name here

Read More

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಪಡ್ನವೀಸ್ ಗೆ ಕೊರೋನಾ

ಮಹಾರಾಷ್ಟ್ರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಗೆ ಶನಿವಾರ (ಅ.24) ಕೊರೋನಾ ಪಾಸಿಟಿವ್ ಬಂದಿದೆ. ದೇವೇಂದ್ರ ಫಡ್ನವಿಸ್ ಅವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಕಳೆದ ಕೆಲವು...

ಬಳ್ಳಾರಿಯಲ್ಲಿ ಮುಂದುವರಿದ ಡಿವೈಎಸ್ ಪಿ ರಾಜೀನಾಮೆ ಪರ್ವ

ಬಳ್ಳಾರಿ:  ರಾಜ್ಯದ ಬಳ್ಳಾರಿಯಲ್ಲಿ ಡಿವೈಎಸ್ ಪಿ ರಾಜೀನಾಮೆ ಪರ್ವ ಮುಂದುವರಿದಿದೆ.  ಕೂಡ್ಲಗಿ ಡಿವೈಎಸ್ ಪಿ ಅನುಪಮಾ ಶೆಣೈ ಬಳಿಕ ಬಳ್ಳಾರಿ ಡಿವೈಎಸ್ ಪಿ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಐಜಿಪಿ ನಂಜುಂಡ ಸ್ವಾಮಿ  ಅವರು...

ಬರಾಕ್ ಒಬಾಮಾ ನಿಜವಾಗ್ಲೂ ಖಾಸಗಿ ಕಂಪನಿ ನೌಕರರಾ…?

ಅಮೆರಿಕ: 'ಎರಡು ಬಾರಿ ಅಮೆರಿಕ ದೇಶದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಒಂದು ಖಾಸಗಿ ನೌಕರಿ ಮಾಡುತ್ತಿದ್ದಾರೆ. ಭಾರತ ದೇಶದಲ್ಲಿ ಒಂದು ಬಾರಿ ಶಾಸಕನಾದರೆ ಸಾಕು. ಐದು ಪೀಳಿಗೆ ಕುಳಿತು ತಿನ್ನುವಷ್ಟು ಸಂಪತ್ತನ್ನು ಗಳಿಸುತ್ತಾರೆ..' -...

Recent

error: Content is protected !!