ನವದೆಹಲಿ: ಭಾರತ ಮತ್ತು ಬಾಂಗ್ಲಾ ನೌಕಾಪಡೆಗಳ ಜಂಟಿ ಸಮರಾಭ್ಯಾಸ ಇಂದು ನಡೆಯಲಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ನಿಕಟ ಸಹಕಾರ ಸೇರಿದಂತೆ ಹಲವು ಆಯಾಮಗಳನ್ನು ಈ ಸಮರಾಭ್ಯಾಸ ಪರೀಕ್ಷಿಸಲಿದೆ.
ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯದ ಹಿನ್ನೆಲೆಯಲ್ಲಿ ಭಾರತ ನೆರೆಯ ಎಲ್ಲ ದೇಶಗಳ ಜತೆ ನಿಕಟ ನೌಕಾ ಪಡೆ ಸಹಕಾರಕ್ಕೆ ಮುಂದಾಗಿದೆ.
ಭಾರತದ ಅತ್ಯಾಧುನಿಕ ಯುದ್ಧ ನೌಕೆಗಳು ಈ ಸಮಾರಾಭ್ಯಾಸದಲ್ಲಿ ಭಾಗವಹಿಸಲಿವೆ.