Monday, October 3, 2022

ಭಾರತ- ಚೀನಾ ಗಡಿ ವಿವಾದ:ಸೇನಾ ಹಿಂತೆಗೆತ ಮಾತುಕತೆಯಲ್ಲಿ ಯಶಸ್ಸು

Follow Us

Newsics.com

ನವದೆಹಲಿ: ಸರಣಿ ಸಭೆಗಳ ಬಳಿಕ ಕೊನೆಗೂ  ಮುಂಚೂಣಿ ಪ್ರದೇಶಗಳಿಂದ ಮೂಲ ನೆಲೆಗಳಿಗೆ ಮರಳಲು ಚೀನಾ ಸಮ್ಮತಿ ಸೂಚಿಸಿದೆ.  ಫಿಂಗರ್ -8 ನೆಲೆಗೆ ಮರಳುವುದಾಗಿ ಚೀನಾ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ. ಪೂರ್ವ ಲಡಾಕ್ ನ  ಉತ್ತರ ಪನ್ ಗೋಂಗ್ ನಿಂದ ಮೊದಲು ಚೀನಾ ಸೇನಾ ಹಿಂತೆಗೆತ ಆರಂಭವಾಗಲಿದೆ. ಫಿಂಗರ್ -8 ನೆಲೆಗೆ ಯೋಧರನ್ನು ಚೀನಾ ಹಿಂದಕ್ಕೆ ಕರೆಯಿಸಿಕೊಳ್ಳಲಿದೆ.

ಮೂರು ಹಂತಗಳಲ್ಲಿ ಈ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.  ಮುಂದಿನ  ವರ್ಷ ಎಪ್ರಿಲ್ ತಿಂಗಳಲ್ಲಿ ಇದು ಅಂತ್ಯಗೊಳ್ಳಲಿದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲೆ ಚೀನಾ ಈ ನಿರ್ಧಾರಕ್ಕೆ ಬಂದಿದೆ.  ಫಿಂಗರ್ 4 ಗಡಿ ನೆಲೆಯತ್ತ ಬಂದಿರುವ ಚೀನಾ ಯೋಧರು ಹಿಂದಕ್ಕೆ ಸರಿಯಲಿದ್ದಾರೆ.

ಚೀನಾದ ಯಾವುದೇ ಸವಾಲನ್ನು ಎದುರಿಸಲು ಭಾರತ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿತ್ತು. ಅಮೆರಿಕದಿಂದ ಚಳಿಗಾಲ ಎದುರಿಸಲು ಸೈನಿಕರಿಗೆ ವಿಶೇಷ ಉಡುಪುಗಳನ್ನು  ತರಿಸಲಾಗಿತ್ತು,

ರಾಜತಾಂತ್ರಿಕ ಮತ್ತು ಸೇನಾಧಿಕಾರಿಗಳ ಮಟ್ಟದ ಮಾತುಕತೆಯ ಬಳಿಕ ಚೀನಾ ಸೇನಾ ಹಿಂತೆಗೆತಕ್ಕೆ ಸಮ್ಮತಿ ಸೂಚಿಸಿದೆ

ಉಗ್ರ ಸಂಘಟನೆಗಳೊಂದಿಗೆ ನಂಟು ಆರೋಪ: ಎನ್ ಐ ಎ ಯಿಂದ ಶಿರಸಿ ಯುವಕನ ಬಂಧನ

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!