newsics.com
ನವದೆಹಲಿ: ಚೀನಾ ಗಡಿಯಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ಭಾರತ ಯುದ್ಧ ಟ್ಯಾಂಕರ್’ಗಳನ್ನು ನಿಯೋಜಿಸಿದೆ.
ಸದ್ಯಕ್ಕೆ ಗಡಿ ಬಿಕ್ಕಟ್ಟು ಶಮನಗೊಳ್ಳುವ ಸೂಚನೆ ಕಾಣದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಪೂರ್ವ ಲಡಾಖ್ ನಲ್ಲಿ ಟಿ-90, ಟಿ-72 ಟ್ಯಾಂಕ್ ಗಳು ಮತ್ತು ಭೂಸೇನಾ ಹೋರಾಟದ ವಾಹನಗಳನ್ನು ಚುಮಾರ್ ಮತ್ತು ಡೆಮ್ ಚೋಕ್ ಭಾಗಗಳಲ್ಲಿ ನಿಯೋಜಿಸಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ವಿಡಿಯೋ ಬಿಡುಗಡೆ ಮಾಡಿದೆ.
ಟ್ಯಾಂಕ್ ಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಹೊತ್ತೊಯ್ಯುವ ವಾಹನಗಳು ಸಾಲಾಗಿ ನಿಂತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಈ ಬಿಎಂಪಿ-2 ವಾಹನಗಳು ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.