ನವದೆಹಲಿ: ವಿಶ್ವ ಆರ್ಥಿಕ ಫೋರಂ ಬಿಡುಗಡೆಗೊಳಿಸಿರುವ ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಪಟ್ಟಿಯಲ್ಲಿ ಭಾರತ ಕೊನೆಯ ಏಳನೇ ಸ್ಥಾನ ಗಳಿಸಿದೆ. ಹೊಸ ಸಾಮಾಜಿಕ ಚಲನಶೀಲತೆಯ ಸೂಚ್ಯಂಕದಲ್ಲಿ ಸ್ಥಾನ ಪಡದಿರುವ 82 ರಾಷ್ಟ್ರಗಳ ಪೈಕಿ ಭಾರತ 76ನೇ ಸ್ಥಾನದಲ್ಲಿದೆ.
ದೇಶಗಳ ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಕೆಲಸ ಮತ್ತು ಸಾಮಾಜಿಕ ರಕ್ಷಣೆ, ಸಮಾನ ವೇತನ ಪತ್ತಿತರರ ಅಂಶಗಳನ್ನು ಪರಿಗಣಿಸಿ ಶ್ರೇಯಾಂಕ ಸಿದ್ಧಪಡಿಸಲಾಗಿದೆ ಎಂದು ಫೋರಂ ಮಂಡಿಸಿದ ವರದಿ ತಿಳಿಸಿದೆ.