ಲೇಹ್: ಭಾರತ ಚೀನಾ ಗಡಿಯಂಚಿನಲ್ಲಿರುವ ಲೇಹ್ ನಲ್ಲಿ ಸಮರಾಭ್ಯಾಸ ಆರಂಭಿಸಿದೆ. ಲೇಹ್ ಸಮೀಪದ ಸಕ್ನಾ ದಲ್ಲಿ ಈ ಕವಾಯತು ನಡೆಯುತ್ತಿದೆ. ಅತ್ಯಾಧುನಿಕ ಯುದ್ದ ಟ್ಯಾಂಕರ್ ಟಿ-90 ಸೇರಿದಂತೆ ಹಲವು ಟ್ಯಾಂಕರ್ ಗಳು ಶಕ್ತಿ ಪ್ರದರ್ಶಿಸುತ್ತಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಭೂ ಸೇನಾ ಮುಖ್ಯಸ್ಛ ಎಂ ಎಂ ನರ್ವಾಣೆ ಸೇನೆಯ ದಾಳಿ ಸಾಮರ್ಥ್ಯವನ್ನು ಪರೀಕ್ಷೆಗೊಳಪಡಿಸಿದ್ದಾರೆ. ಟಿ-90 ಭಾರತದ ಬತ್ತಳಿಕೆಯಲ್ಲಿರುವ ಅತ್ಯಾಧುನಿಕ ಯುದ್ಧ ಟ್ಯಾಂಕ್ ರ್ .
ಭೂಸೇನೆಯ ಪದಾತಿದಳದ ದಾಳಿ ಯುದ್ದ ವಾಹನಗಳು ಕೂಡ ಶಕ್ತಿ ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ ಸೇನಾ ಹಿಂತೆಗೆತಕ್ಕೆ ಚೀನಾ ಸಮ್ಮತಿಸಿದ್ದರೂ ಫಿಂಗರ್-4 ನೆಲೆಯಿಂದ ಹಿಂದೆ ಸರಿಯುವುದಕ್ಕೆ ಅಪಸ್ವರ ಎತ್ತಿದೆ. ಚೀನಾದ ಈ ಕ್ರಮವನ್ನು ಭಾರತ ತೀವ್ರವಾಗಿ ವಿರೋಧಿಸಿದೆ.
ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಯುದ್ಧ ಟ್ಯಾಂಕರ್ ಗಳ ಸಾಮರ್ಥ್ಯ ಅರಿಯಲು ಈ ಕವಾಯತು ನಡೆಸಲಾಗುತ್ತಿದೆ. ಇದರೊಂದಿಗೆ ಚೀನಾಕ್ಕೆ ಸ್ಪಷ್ಟ ಸಂದೇಶ ಕೂಡ ಭಾರತ ರವಾನಿಸಿದೆ.