Saturday, October 16, 2021

ಭಾರತದ ಮಹಿಳೆಯರ ತಂಡಕ್ಕೆ ಐತಿಹಾಸಿಕ ಜಯ: ಆಸ್ಟ್ರೇಲಿಯಾ ವಿಶ್ವದಾಖಲೆ ಓಟ ಅಂತ್ಯ

Follow Us

newsics.com

ಆಸ್ಟ್ರೇಲಿಯಾ: ಮೂರನೇ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ 264 ರನ್ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದ ಭಾರತದ ಮಹಿಳಾ ತಂಡ ಇತಿಹಾಸ ಸೃಷ್ಟಿಸಿದೆ. ಕಳೆದ 27 ಪಂದ್ಯಗಳಲ್ಲಿ ಆಸ್ಟ್ರೇಲಿಯನ್ನರು ಅನುಭವಿಸಿದ ಮೊದಲ ಸೋಲು ಇದಾಗಿದೆ.
ಗೆಲ್ಲಲು 265 ರನ್ ಗುರಿ ಪಡೆದ ಭಾರತದ ಮಹಿಳೆಯರು ಮೂರು ಎಸೆತ ಬಾಕಿ ಇರುವಾಗಲೇ ಗುರಿ ಸಾಧಿಸಿದ್ದಾರೆ.

ಇದು ಭಾರತ ಈವರೆಗೆ ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ. ಆಸ್ಟ್ರೇಲಿಯಾದ ಮಹಿಳೆಯರು ಈ ಸೋಲಿಗೆ ಮುನ್ನ ಕಳೆದ 26 ಪಂದ್ಯಗಳಿಂದ ಸತತವಾಗಿ ಗೆಲ್ಲುತ್ತಾ ಬಂದು ವಿಶ್ವದಾಖಲೆ ಸ್ಥಾಪಿಸಿದ್ದರು. ಇದೀಗ ಅಂತಿಮವಾಗಿ ಈ ವಿಶ್ವದಾಖಲೆಯ ಓಟಕ್ಕೆ ಭಾರತದ ಮಹಿಳೆಯರು ಬ್ರೇಕ್ ಹಾಕಿದ್ದಾರೆ.

ಆಸ್ಟ್ರೇಲಿಯಾ ತಂಡವೇ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ, 50 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದರು. ಈ ಗುರಿ ಬೆನ್ನತ್ತಿದ್ದ ಭಾರತೀಯ ತಂಡ 49.3 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಭಾರತ ಸರಣಿಯಲ್ಲಿ ಸೋಲಿನ ಅಂತರ ತಗ್ಗಿಸಿದ್ದು, ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ 2-1ರಿಂದ ಆಸ್ಟ್ರೇಲಿಯಾ ವಶವಾಗಿದೆ.

ಸ್ಕೋರ್ ವಿವರ:

ಆಸ್ಟ್ರೇಲಿಯಾ ಮಹಿಳಾ ತಂಡ 50 ಓವರ್ ಗಳಲ್ಲಿ 264/9
ಆಷ್ಲೀಗ್ ಗಾರ್ಡ್ನರ್ 67, ಬೆತ್ ಮೂನೀ 52, ಟಾಹ್ಲಿಯಾ ಮೆಕ್​ಗ್ರಾಥ್ 47, ಅಲೀಸಾ ಹೀಲೀ 35, ಎಲಿಸ್ ಪೆರಿ 26 ರನ್
ಝುಲನ್ ಗೋಸ್ವಾಮಿ 37/3, ಪೂಜಾ ವಸ್ತ್ರಾಕರ್ 46/3

ಭಾರತ ಮಹಿಳಾ ತಂಡ 49.3 ಓವರ್ ಗಳಲ್ಲಿ 266/8
ಯಸ್ತಿಕಾ ಭಾಟಿಯಾ 64, ಶಫಾಲಿ ವರ್ಮಾ 56, ದೀಪ್ತಿ ಶರ್ಮಾ 31, ಸ್ನೇಹ್ ರಾಣಾ 30, ಸ್ಮೃತಿ ಮಂಧನಾ 22, ಮಿಥಾಲಿ ರಾಜ್ 16 ರನ್
ಅನ್ನಾಬೆಲ್ ಸದರ್​ಲ್ಯಾಂಡ್ 30/3

ಕೆಕೆಆರ್​ ವಿರುದ್ಧ ಸಿಎಸ್’ಕೆಗೆ 2 ವಿಕೆಟ್​ಗಳ ಜಯ

ಮತ್ತಷ್ಟು ಸುದ್ದಿಗಳು

Latest News

3 ದಿನ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ

newsics.com ಮಧ್ಯ ಪ್ರದೇಶ: ಇಲ್ಲಿನ ಬೆತುಲ್ ಜಿಲ್ಲೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತನ್ನ ಗ್ರಾಹಕರಿಗೆ 3 ದಿನ ಉಚಿತ ಪೆಟ್ರೋಲ್ ನೀಡಿದ್ದಾರೆ. ದೀಪಲ್ ಸೈನಾನಿ ಎಂಬುವವರು ಹೆಣ್ಣು ಮಗು...

ರಾಜ್ಯದಲ್ಲಿ ಹೊಸದಾಗಿ 264 ಕೊರೋನಾ ಪ್ರಕರಣ ಪತ್ತೆ, 421 ಮಂದಿ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 264 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದೆ. 421 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,35,659 ಜನ ಚೇತರಿಸಿಕೊಂಡಿದ್ದಾರೆ. 6 ಸೋಂಕಿತರು...

ಲಸಿಕೆ ನೀಡಲು ಅಪಾಯಕಾರಿ ಬಿದಿರಿನ ಸೇತುವೆ ದಾಟಿದ ಆರೋಗ್ಯ ಕಾರ್ಯಕರ್ತ: ವಿಡಿಯೋ ವೈರಲ್

newsics.com ಅರುಣಾಚಲ ಪ್ರದೇಶ: ಇಲ್ಲಿನ ಆರೋಗ್ಯ ಕಾರ್ಯಕರ್ತರೊಬ್ಬರು ಜನರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲು ಬಿದಿರಿನ ಸೇತುವೆ ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು ತಾತ್ಕಾಲಿಕವಾಗಿ ನಿರ್ಮಿಸಿದ ಅಪಾಯಕಾರಿ ಬಿದಿರಿನ ಸೇತುವೆ...
- Advertisement -
error: Content is protected !!