ನವದೆಹಲಿ: ಕೊರೋನಾವೈರಸ್ ಸೋಂಕಿನ ಭಯದಿಂದ ವಿಶ್ವದ ಎಲ್ಲಾ ರಾಷ್ಟ್ರಗಳು ಚೀನಾದ ಸಂಪರ್ಕ ಕಡಿದುಕೊಳ್ಳುತ್ತಿರುವ ಗಂಭೀರ ಪರಿಸ್ಥಿತಿಯ ನಡುವೆಯೇ ಭಾರತದ ಹುಡುಗನೋರ್ವ ಚೀನಿ ಹುಡುಗಿಯನ್ನು ಕೈಹಿಡಿದಿದ್ದಾನೆ!
ಜರತಾರಿ ಸೀರೆಯಲ್ಲಿ ಕಂಗೊಳಿಸಿದ ಚೀನಾ ಚೆಲುವೆಯನ್ನು ಮಧ್ಯಪ್ರದೇಶದ
ಹೈದ ವರಿಸಿದ್ದಾನೆ.
ಮಧ್ಯಪ್ರದೇಶದ ಭಾನುವಾರ ಮಾಂಡ್ಸೌರ್ನಲ್ಲಿ ನಡೆದ ವಿವಾಹದಲ್ಲಿ ಪಾಲ್ಗೊಳ್ಳಲು ಮದುಮಗಳು
ಜಿಹಾವೊ ವಾಂಗ್ ಮತ್ತು ಅವರ ಕುಟುಂಬ ಸದಸ್ಯರು ಭಾರತಕ್ಕೆ ಆಗಮಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಆರು ವೈದ್ಯರ ತಂಡ ಜಿಹಾವೊ ಅವರ ಕುಟುಂಬದ ಸದಸ್ಯರನ್ನು ಸತತವಾಗಿ ಪರೀಕ್ಷಿಸುತ್ತಿದೆ.