Saturday, November 26, 2022

ಭಾರತೀಯ ಮೂಲದ ಪತ್ರಕರ್ತೆಗೆ ಪ್ರತಿಷ್ಠಿತ ‘ಪುಲಿಟ್ಜೆರ್ ಪ್ರಶಸ್ತಿ’

Follow Us

newsics.com
ನ್ಯೂಯಾರ್ಕ್: ಚೀನಾದಲ್ಲಿ ಉಯಿಘರ್ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಬಂಧಿಸಿಟ್ಟಿದ್ದ 260 ಕ್ಯಾಂಪ್​ಗಳನ್ನು ಪತ್ತೆ ಮಾಡಿದ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಈ ಬಾರಿಯ ಪುಲಿಟ್ಜೆರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಮೆರಿಕದ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿಯಾದ ಪುಲಿಟ್ಜೆರ್ ಪ್ರಶಸ್ತಿ ಭಾರತೀಯ ಮೂಲದ ಪತ್ರಕರ್ತೆಗೆ ದೊರಕಿದೆ.
ಬುಜ್​ ಫೀಡ್​ ನ್ಯೂಸ್’​ ಎಂಬ ಇಂಟರ್​ನೆಟ್​​​ ಮೀಡಿಯಾದಲ್ಲಿ ವರದಿಗಾರ್ತಿಯಾಗಿರುವ ಮೇಘಾ ಮೂಲತಃ ತಮಿಳುನಾಡಿನವರು.
ಮೇಘಾ ಅವರೊಂದಿಗೆ ಅಲಿಸನ್ ಕಿಲ್ಲಿಂಗ್ ಮತ್ತು ಕ್ರಿಸ್ಟೋ ಬುಸ್ಚೆಕ್ ಎನ್ನುವವರು ಸಹೋದ್ಯೋಗಿಗಳಾಗಿದ್ದಾರೆ.
ಮೇಘಾ ತಮ್ಮ ಸಹೋದ್ಯೋಗಿಗಳ‌ ತಂಡದೊಂದಿಗೆ ಸ್ಯಾಟಲೈಟ್​ ಇಮೇಜ್​ ಹಾಗೂ 3ಡಿ ಆರ್ಕಿಟೆಕ್ಚರಕಲ್​ ತಂತ್ರಜ್ಞಾನವನ್ನು ಬಳಸಿ 50,000 ಪ್ರದೇಶಗಳ ಮಾಹಿತಿ ಸಂಗ್ರಹಿಸಿ 10 ಲಕ್ಷ ಮುಸ್ಲಿಂರು ಈ ಕ್ಯಾಂಪ್​ಗಳಲ್ಲಿ ಇದ್ದಾರೆ ಎಂದು ಬಹಿರಂಗಪಡಿಸಿದ ಮಾಹಿತಿಯನ್ನು ವರದಿ ಮಾಡಿದ್ದರು.
ಹೀಗಾಗಿ ಅಂತಾರಾಷ್ಟ್ರೀಯ ವರದಿ ವಿಭಾಗದಲ್ಲಿ ಮೇಘಾ ರಾಜಗೋಪಾಲನ್​ಗೆ ಪುಲಿಟ್ಜೆರ್ ಪ್ರಶಸ್ತಿ ಲಭಿಸಿದೆ.

ಕಪ್ಪು ಉಡುಪಿನಲ್ಲಿ ಮಿಂಚಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಮತ್ತಷ್ಟು ಸುದ್ದಿಗಳು

vertical

Latest News

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು...

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...

ನಟಿ ರಿಚಾ ಚಡ್ಡಾಗೆ ಬೆಂಬಲ ಸೂಚಿಸಿದ ಸ್ವರ ಭಾಸ್ಕರ್

newsics.com ಮುಂಬೈ: ದೇಶದ ಸೇನೆಯನ್ನು ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ನಟಿ ರಿಚಾ ಚಡ್ಡಾಗೆ  ನಟಿ ಸ್ವರ ಭಾಸ್ಕರ್ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಿಚಾ...
- Advertisement -
error: Content is protected !!