newsics.com
ಡೆಹ್ರಾಡೂನ್: ಪ್ಯಾರಾ ಶೂಟರ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 28 ಬಾರಿ ಚಿನ್ನದ ಪದಕ ಗೆದ್ದ ದಿಲ್ರಾಜ್ ಕೌರ್ (36) ಎನ್ನುವ ಕ್ರೀಡಾಪಟು ಇದೀಗ ರಸ್ತೆ ಬದಿ ಚಿಪ್ಸ್, ಬಿಸ್ಕತ್ ಮಾರಿ ಜೀವನ ನಡೆಸುತ್ತಿದ್ದಾರೆ.
ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ನೆಲೆಸಿರುವ ದಿಲ್ರಾಜ್ ಅವರು 2015ರಲ್ಲಿ ಕ್ರೀಡಾ ಲೋಕಕ್ಕೆ ಪ್ರವೇಶಿಸಿ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದಿದ್ದರು. ದಿಲ್ರಾಜ್ ಕೌರ್ ಭಾರತದ ಮೊದಲ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಶೂಟರ್ಗಳಲ್ಲಿ ಒಬ್ಬರು. ಆದರೆ ಯಾವ ಪದಕವೂ ಜೀವನ ನಡೆಸಲು ಸಹಾಯಕವಾಗಿಲ್ಲ. ಸಾಕಷ್ಟು ಬಾರಿ ಸರ್ಕಾರವನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ದಿಲ್ರಾಜ್.
ಅವರು ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 28 ಚಿನ್ನದ ಪದಕ, 8 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದರು.