Saturday, November 26, 2022

ಒಂದೇ ಕಾಲಿನಲ್ಲಿ ನರ್ತಿಸಿ ನೋಡುಗರ ಮನ ಗೆದ್ದ ಸುಭ್ರೀತ್ ಕೌರ್

Follow Us

newsics.com
ಚಂಡೀಗಢ: ಒಂದೇ ಕಾಲಿದ್ದರೂ ತನ್ನ ನೃತ್ಯ ಕೌಶಲ್ಯದಿಂದ ಗುರುತಿಸಿಕೊಂಡ ಯುವತಿ ಪಂಜಾಬ್‌ನ ಸುಭ್ರೀತ್ ಕೌರ್ ಗುಮ್ಮನ್.
2014ರಲ್ಲಿ ಹಿಂದಿಯ ಖ್ಯಾತ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿ, ಸಾವಿರಾರು ಅಂಗವಿಕಲರಿಗೆ ಸ್ಪೂರ್ತಿಯಾಗಿದ್ದರು .


2009ರಲ್ಲಿ ಆದ ಬೈಕ್ ಅಪಘಾತದಲ್ಲಿ ಸುಭ್ರೀತ್ ಕಾಲಿಗೆ ಬಲವಾಗಿ ಏಟು ಬಿದ್ದಿತ್ತು. ಬಳಿಕ ಅದು ಸೋಂಕು ಹರಡಲು ಪ್ರಾರಂಭವಾಗಿತ್ತು. ಹೀಗಾಗಿ ವೈದ್ಯರು ಕಾಲನ್ನೇ ಕಟ್ ಮಾಡಿದ್ದರು. ಆದರೂ ಡ್ಯಾನ್ಸ್ ಕಲಿಯುವ ಕನಸು ಕಮರದಂತೆ ಒಂದು ವರ್ಷದ ಬಳಿಕ ತನ್ನ ಡ್ಯಾನ್ಸ್ ಕಲಿಯಲು ಜಿಮ್ ಗೆ ಸೇರಿ ಸ್ನಾಯುಗಳನ್ನು ಬಲಪಡಿಸಿಕೊಂಡು ಚಂಡೀಗಢ ಅಕಾಡೆಮಿಯಲ್ಲಿ ಡ್ಯಾನ್ ತರಬೇತಿಗೆ ಸೇರಿದ್ದರು.
ಒಂದೇ ಕಾಲಿನಲ್ಲಿ ನೃತ್ಯ ತರಬೇತಿ ಪಡೆದು ಏಷ್ಯಾ ಗಾಟ್ ಟ್ಯಾಲೆಂಟ್ ಸೇರಿದಂತೆ ಇತರ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ, ಅಂಗವಿಕಲತೆಯನ್ನು ಮೆಟ್ಟಿ ನಿಂತು ಮಾದರಿಯಾಗಿದ್ದಾರೆ.
ಇದೀಗ ಅಮೆರಿಕದ ಗಾಟ್ ಟ್ಯಾಲೆಂಟ್‌ನ ವೇದಿಕೆಯಲ್ಲಿ ಪ್ರದರ್ಶನ ನೀಡುವ ಆಸೆ ಸುಭ್ರೀತ್ ಅವರದ್ದಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!