Wednesday, October 5, 2022

ಬಾಂಗ್ಲಾ ಸೇನೆಗೆ ಭಾರತದ ಮಿಲಿಟರಿ ಕುದುರೆ, ಶ್ವಾನ ಉಡುಗೊರೆ

Follow Us

newsics/com
ನವದೆಹಲಿ: ಬಾಂಗ್ಲಾದೇಶ ಸೇನೆಗೆ 20 ಮಿಲಿಟರಿ ಕುದುರೆಗಳು ಹಾಗೂ 10 ಶ್ವಾನಗಳನ್ನು ಭಾರತೀಯ ಸೇನೆ ಉಡುಗೊರೆಯಾಗಿ ನೀಡಿದೆ.
ಭಾರತೀಯ ಸೇನೆ ಪಶುವೈದ್ಯಕೀಯ ಮತ್ತು ರಿಮೌಂಟ್ ದಳ ನೆಲಬಾಂಬ್‍ಗಳನ್ನು ಪತ್ತೆ ಹಚ್ಚುವ ತರಬೇತಿ ಪಡೆದಿರುವ 20 ಮಿಲಿಟರಿ ಕುದುರೆ ಮತ್ತು 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಭಾರತೀಯ ಸೇನೆ ಉಡುಗೊರೆಯಾಗಿ ನೀಡಿದೆ. ಕಳೆದ ವರ್ಷ ಭಾರತ 10 ಶ್ವಾನಗಳನ್ನು ಬಾಂಗ್ಲಾದೇಶಕ್ಕೆ ಉಡುಗೊರೆಯಾಗಿ ನೀಡಿತ್ತು.
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸ್ನೇಹ ಸೌಹಾರ್ದವೃದ್ಧಿಗೆ ಈ ಉಡುಗೊರೆ ಸಹಾಯಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಪೆಟ್ರಾಫೋಲ್ ಬೆನಾಪೋಲ್ ಇಂಟಿಗ್ರೇಟೆಡ್ ಪೋಸ್ಟ್ ಬಳಿ ಬಾಂಗ್ಲಾದೇಶ ಸೇನೆಯ ನಿಯೋಗ ಭಾರತೀಯ ಸೇನೆಯಿಂದ ಈ ಉಡುಗೊರೆ ಸ್ವೀಕರಿಸಿದೆ. ಭಾರತೀಯ ಸೇನಾ ನಿಯೋಗವನ್ನು ಬ್ರಹ್ಮಾಸ್ತ್ರ ಕಾಪ್ಸ್ ಮುಖ್ಯಸ್ಥ ಮೇಜರ್ ಜನರಲ್ ನರಿಂದರ್ ಸಿಂಗ್ ಕ್ರೌಡ್ ನೇತೃತ್ವದಲ್ಲಿ ಕುದುರೆ ಮತ್ತು ಶ್ವಾನಗಳನ್ನು ಬಾಂಗ್ಲಾದೇಶ ಸೇನೆಗೆ ನೀಡಲಾಯಿತು.
ಬಾಂಗ್ಲಾದೇಶ ಸೇನಾ ನಿಯೋಗವನ್ನು ಜೆಸ್ಸೋರ್ ಮೂಲದ ವಿಭಾಗದ ಕಮಾಂಡಿಂಗ್ ಮಾಡುತ್ತಿರುವ ಮೇಜರ್ ಜನರಲ್ ಮೊಹಮ್ಮದ್ ಹುಮಾಯೂನ್ ಕಬೀರ್ ನೇತೃತ್ವ ವಹಿಸಿದ್ದರು.

ಒಂದೇ ಕುಟುಂಬದ 6 ಮಂದಿ ನಿಗೂಢ ಸಾವು

ಡಿ.15ರ ಬಳಿಕ ಶಾಲೆ ಆರಂಭಕ್ಕೆ ಆರ್‌ಟಿಇ ಪಾಲಕರ ಸಂಘ ಸಲಹೆ

ವಕೀಲಿ ವೃತ್ತಿಗೆ ವಿದಾಯ ಹೇಳಲಿದ್ದಾರೆ ಕಮಲಾ ಹ್ಯಾರಿಸ್ ಪತಿ!

ಮತ್ತಷ್ಟು ಸುದ್ದಿಗಳು

vertical

Latest News

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...
- Advertisement -
error: Content is protected !!