newsics.com
ನವದೆಹಲಿ: ಭಾರತದ ದುಬಾರಿ ಸ್ಕೂಟರ್ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ನಾಳೆ ಬಿಡುಗಡೆಯಾಗಲಿದೆ. ಬಿಎಂಡಬ್ಲ್ಯು ಮೊಟೊರಾಡ್ ಸಾಮಾಜಿಕ ಮಾಧ್ಯಮದ ಮೂಲಕ ಸ್ಕೂಟರ್ ಬಿಡುಗಡೆ ಕುರಿತು ದೃಢಪಡಿಸಿದೆ. ಇದರ ನಿರೀಕ್ಷಿತ ಬೆಲೆ 5 ಲಕ್ಷ ರೂ. ಆಗಿರಲಿದೆ.
ಸುಜುಕಿ ಬರ್ಗ್ಮನ್ ಸ್ಟ್ರೀಟ್ 125 ಮತ್ತು ಎಪ್ರಿಲಿಯಾ ಎಸ್ಎಕ್ಸ್ಆರ್ 160 ಗಿಂತ ಇದು ಭಿನ್ನವಾಗಿರಲಿದೆ. ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಆಗಿದ್ದು, ಇದನ್ನು ಹೆದ್ದಾರಿಯಲ್ಲಿ ದೀರ್ಘ ಮೈಲಿಗಳವರೆಗೆ ಓಡಿಸಲು ಬಳಸಬಹುದಾಗಿದೆ. 1 ಲಕ್ಷ ರೂಪಾಯಿ ಮೊತ್ತಕ್ಕೆ ಸ್ಕೂಟರ್ ಮುಂಗಡ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ದೇಶದಲ್ಲಿ ಈಗಾಗಲೇ ಸುಮಾರು 100 ಬುಕಿಂಗ್ ಮಾಡಲಾಗಿದೆ.
ಮ್ಯಾಕ್ಸಿ-ಸ್ಕೂಟರ್ ಮೋಟಾರ್ ಸೈಕಲ್ ನಂತೆ ಆರಾಮದಾಯಕವಾಗಿರಲಿದೆ. ಬಿಎಂಡಬ್ಲ್ಯು ಸಿ 400 ಜಿಟಿ ಯಾವುದೇ ನೇರ ಸ್ಪರ್ಧಿಗಳನ್ನು ಹೊಂದಿಲ್ಲ. ಆದರೆ, ಇದು ಹೋಂಡಾ ಫೋರ್ಜಾ 350ನೊಂದಿಗೆ ಸ್ಪರ್ಧಿಸುವ ಸಾಧ್ಯತೆಯಿದೆ.