ಬೆಂಗಳೂರು: ಡಿಸೆಂಬರ್ ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಶೇ.23.7ರ ಹೆಚ್ಚುವರಿ ಆದಾಯ ಗಳಿಸಿದೆ. ಕನ್ಸಾಲಿಡೇಟೆಡ್ ನೆಟ್ ಪ್ರಾಫಿಟ್ 4,466 ಕೋಟಿ ಆಗಿದೆ
ಇನ್ಫೋಸಿಸ್ ಶುಕ್ರವಾರ ಬಿಡುಗಡೆ ಮಾಡಿರುವ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
ಕಳೆದ ವರ್ಷದ ಇದೇ ಅವಧಿಯ ನೆಟ್ ಪ್ರಾಫಿಟ್ 3,610 ಕೋಟಿ ರೂಪಾಯಿ ಆಗಿತ್ತು. ಕಳೆದ ಹಣಕಾಸು ವರ್ಷದ ಇದೇ ಅವಧಿಯ ಆದಾಯ 21,400 ಕೋಟಿ ಇದ್ದದ್ದು ಈ ವರ್ಷ ಶೇಕಡ 7.9 ಹೆಚ್ಚಳವಾಗಿದ್ದು 23,092 ಕೋಟಿ ಆಗಿದೆ.