Tuesday, April 13, 2021

ಕೊಚ್ಚಿ ತಲುಪಿದ ಐಎನ್ಎಸ್ ಜಲಾಶ್ವ ಹಡಗು

ಕೊಚ್ಚಿ: ಮಾಲಿ ದ್ವೀಪದಲ್ಲಿ ಸಿಲುಕಿದ್ದ 698 ಭಾರತೀಯರನ್ನು ಕರೆ ತಂದಿರುವ ಐಎನ್ ಎಸ್ ಜಲಾಶ್ವ ನೌಕೆ ಕೊಚ್ಚಿ ಬಂದರು ತಲುಪಿದೆ. ವಿದೇಶದಲ್ಲಿ ಸಂಕಷ್ಟಕ್ಕೆ ಗುರಿಯಾಗಿರುವ ಭಾರತೀಯರನ್ನು ಕರೆ ತರುವ ಸಮುದ್ರ ಸೇತು ಯೋಜನೆಯಡಿಯಲ್ಲಿ ಇವರನ್ನು ಕರೆ ತರಲಾಗಿದೆ. ಐಎನ್ ಎಸ್ ಜಲಾಶ್ವ ಭಾರತದ ನೌಕಾಪಡೆಗೆ ಸೇರಿದ ಹಡಗು. 800ಕ್ಕೂ ಹೆಚ್ಚು ಮಂದಿಗೆ ಪ್ರಯಾಣಿಸಲು ಸಾಧ್ಯವಿದ್ದರೂ ಸಾಮಾಜಿಕ ಅಂತರ ಖಾತರಿಪಡಿಸಲು ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಕರೆ ತಂದಿದೆ. ಕೊಚ್ಚಿ ಬಂದರಿನಲ್ಲಿ ಸಮಗ್ರ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಪ್ರಯಾಣಿಕರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುವುದು. ವಿಮಾನ ನಿಲ್ದಾಣದಲ್ಲಿ ಅನುಸರಿಸಲಾಗುತ್ತಿರುವ  ತಪಾಸಣಾ ಮಾದರಿಯನ್ನು ಇಲ್ಲಿ ಪಾಲಿಸಲು ಆದೇಶ ನೀಡಲಾಗಿದೆ. ಇಂದು ಭಾರತಕ್ಕೆ ಮರಳಿರುವ ಹೆಚ್ಚಿನವರು ತಮ್ಮ ನೌಕರಿ ಕಳೆದುಕೊಂಡಿದ್ದು, ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!