Thursday, December 2, 2021

ಬಾಲಕನಿಗೆ ಶಿಕ್ಷೆ ಬದಲು ಕೋರ್ಟ್ ನಲ್ಲಿ ಸಿಕ್ತು ದವಸ ಧಾನ್ಯ!

Follow Us

ಬಿಹಾರ: ತಾಯಿಯ ಹಸಿವು ನೀಗಿಸುವುದಕ್ಕೋಸ್ಕರ ಕಳ್ಳತನ ಮಾಡಿದ್ದ ಬಾಲ್ಕನಿಗೆ ಶಿಕ್ಷೆ ವಿಧಿಸುವ ಬದಲು ದವಸ ಧನ್ಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ಬಿಹಾರದ ನಳಂದಾ ಜಿಲ್ಲೆಯ ಬಿಹಾರ್ ಶರೀಫ್‌ನಲ್ಲಿ ಈ ಘಟನೆ ನಡೆದಿದೆ. ಇಸ್ಲಾಂಪುರದ ಅಪ್ರಾಪ್ತ ವಯಸ್ಕ ಹುಡುಗನೊಬ್ಬನನ್ನು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿ ಬಾಲಾಪರಾಧಿ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಮಾನವೇಂದ್ರ ಮಿಶ್ರಾ ಅವರ ಎದುರು ಹಾಜರುಪಡಿಸಿದ್ದರು.
ವಿಚಾರಣೆ ವೇಳೆ ಬಾಲಕ ಕಿಶೋರ್, ‘ಹಲವು ದಿನಗಳಿಂದ ಕೆಲಸವಿಲ್ಲ, ಊಟವೂ ಇಲ್ಲ. ನಾನು ಹೇಗೋ ಹಸಿವು ತಡೆದುಕೊಳ್ಳಬಲ್ಲೆ. ಮಾನಸಿಕ ಅಸ್ವಸ್ಥಳಾದ ನನ್ನ ತಾಯಿಯ ಹಸಿವು ನೀಗಿಸಲು ಕಳವು ಮಾಡಬೇಕಾಯಿತು…’ ಎಂದು ವಿವರಿಸಿದ. ಇದನ್ನು ಕೇಳಿ ಮರುಕಪಟ್ಟ ನ್ಯಾಯಾಧೀಶರು ಆತನಿಗೆ ದವಸ ಧಾನ್ಯಗಳನ್ನು ತರಿಸಿಕೊಟ್ಟರು. ಆತನ ತಾಯಿಗೆ ಬಟ್ಟೆಯನ್ನೂ ಕೊಡಿಸಿದರು. ಮುಂದಿನ ದಿನಗಳಲ್ಲಿ ಆತನ ಕುಟುಂಬಕ್ಕೆ ಬೇಕಾಗುವ ಎಲ್ಲ ರೀತಿಯ ಸಹಾಯ ಮತ್ತು ಸರ್ಕಾರಿ ಯೋಜನೆಗಳ ಸಂಪೂರ್ಣ ಲಾಭವನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಅಷ್ಟೇ ಅಲ್ಲ, ಆತನ ವರ್ತನೆ ಮುಂದೆ ಹೇಗಿರುತ್ತದೆ ಎಂಬುದರ ಕುರಿತು ತಮಗೆ ಪ್ರತಿ 4 ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕೆಂದೂ ಆದೇಶಿಸಿದ್ದಾರೆ.
ಕೊಳೆಗೇರಿ ನಿವಾಸಿಯಾಗಿರುವ ಬಾಲಕ ಕಿಶೋರ್ ತಂದೆ ಕೆಲ ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ. ಆ ಆಘಾತ ತಾಳದೆ ತಾಯಿ ಮಾನಸಿಕ ಅಸ್ವಸ್ಥಳಾಗಿದ್ದಾಳೆ. ಒಬ್ಬ ತಮ್ಮನೂ ಇದ್ದಾನೆ.

ಮತ್ತಷ್ಟು ಸುದ್ದಿಗಳು

Latest News

‘ಮಿರ್ಜಾಪುರ್’ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಮೃತದೇಹ ಪತ್ತೆ!

newsics.com ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್ ನಲ್ಲಿ ಲಲಿತ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ನಟ ಬ್ರಹ್ಮ ಮಿಶ್ರಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ಅವರ ಫ್ಲಾಟ್‌ ನಲ್ಲಿ ಅರೆ...

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ,...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...
- Advertisement -
error: Content is protected !!