ಜಮ್ಮು: ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಮುಂದಿನ 48 ಗಂಟೆಗಳಲ್ಲಿ 2 ಜಿ ವೇಗದೊಂದಿಗೆ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ.
ಜೊತೆಗೆ ಬ್ರಾಡ್‌ಬ್ಯಾಂಡ್ ಸೇವೆಗಳನ್ನೂ ಹಂತ
ಹಂತವಾಗಿ ಮರುಸ್ಥಾಪನೆ ಮಾಡುವುದಾಗಿ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈ ಹಿಂದೆ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ
ಮುರ್ಮು, ಈ ತಿಂಗಳ ಆರಂಭದಲ್ಲಿ, ಇಂಟರ್ನೆಟ್ ಸೇವೆಗಳನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಸರ್ಕಾರ
ಚಿಂತಿಸುತ್ತಿದೆ ಎಂದು ಭರವಸೆ ನೀಡಿದ್ದರು.