Saturday, June 10, 2023

IPL ಉದ್ಘಾಟನಾ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ, ತಮನ್ನಾ

Follow Us

newsics.com

ನವದೆಹಲಿ: ಮಾ.31ರಿಂದ ಪ್ರತಿಷ್ಠಿತ 16ನೇ ಐಪಿಎಲ್ ಆವೃತ್ತಿಗೆ ಚಾಲನೆ ಸಿಕ್ಕಿದೆ. ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟಿ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಡಾನ್ಸ್‌ ಮಾಡಿದ್ದಾರೆ.

ಗುಜರಾತ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಸಂಜೆ 7.30ಕ್ಕೆ ಮೊದಲ ಪಂದ್ಯ ಆರಂಭವಾಗಿದೆ.

ಸಂಜೆ 6 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ನಟಿಯರಾದ ಮಿಲ್ಕಿ ಬ್ಯೂಟಿ ತಮನ್ನಾ- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೊಂಟ ಬಳುಕಿಸಿದ್ದಾರೆ. ಸಾಮಿ ಸಾಮಿ, ಶ್ರೀವಲ್ಲಿ, ನಾಟು ನಾಟು ಹಾಡಿಗೆ ರಶ್ಮಿಕಾ ಮಂದಣ್ಣ ಐಪಿಎಲ್ ವೇದಿಕೆಯಲ್ಲಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮಿಳಿನ ಟಮ್ ಟಮ್ ಹಾಡಿಗೆ ತಮನ್ನಾ ಕುಣಿದು ಕುಪ್ಪಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
- Advertisement -
error: Content is protected !!