Thursday, December 7, 2023

ಐಪಿಎಲ್: ಮೊದಲ ಪಂದ್ಯ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್

Follow Us

newsics.com
ಅಬುದಾಬಿ: ಐಪಿಎಲ್ 13ನೇ ಅವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಳಿಂದ ಭರ್ಜರಿ ಜಯ ಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ನಾಯಕ ಧೋನಿ ನಿರ್ಧಾರ ಫಲ ಕೊಟ್ಟಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 9 ವಿಕೆಟಿಗೆ 162 ರನ್‌ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ಗೆ 163 ರನ್ ಗಳ ಬೃಹತ್ ಸವಾಲೊಡ್ಡಿತ್ತು. ಈ ಸವಾಲಿನ ಮೊತ್ತ ಬೆನ್ನತ್ತಿದ್ದ ಧೋನಿ ಪಡೆ ಡು ಪ್ಲೆಸಿಸ್ ಹಾಗೂ ಅಂಬಾಟಿ ರಾಯಡು ಅವರ ಅಮೋಘ 115 ರನ್ ಗಳ ಜತೆಯಾಟದೊಂದಿಗೆ 19.2 ಓವರ್’ಗಳಲ್ಲಿ ಗೆಲುವು ಸಾಧಿಸಿತು.
ಮಧ್ಯಮ ಕ್ರಮಾಂಕದ ಆಟಗಾರ ಅಂಬಟಿ ರಾಯಡು ಕೇವಲ 48 ಎಸೆತಗಳಲ್ಲಿ 71 ರನ್ ಬಾರಿಸಿ ಮುಂಬೈ ನೀಡಿದ 163 ರನ್ ಗುರಿ ತಲುಪಲು ಕಾರಣರಾದರು.ಟಾಸ್ ಗೆದ್ದು ಮೊದಲು ಸೂಪರ್ ಕಿಂಗ್ಸ್ ತಂಡ ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡಕ್ಕೆ ರೋಹಿತ್-ಕಾಕ್ ಆರಂಭಿಕ ಜೋಡಿಯು ಪವರ್ ಪ್ಲೇಯ 4.4 ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 44 ರನ್ ಪೇರಿಸಿ ಉತ್ತಮ ಆರಂಭ ನೀಡಿದ್ದರು.
ಆದರೆ ಮಧ್ಯಮ ಕ್ರಮಾಂಕದ ಆಟಗಾರರು ಕೈಕೊಡುವುದರೊಂದಿಗೆ ಮುಂಬೈ ತಂಡ ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿ ಸಾಧಾರಣ ಮೊತ್ತಕ್ಕೆ ತೃಪ್ತಿಪಡಬೇಕಾಯಿತು. ಈ ಮೊತ್ತ ಬೆನ್ನತ್ತಿದ ಚೆನ್ನೈ ತಂಡ ಮೊದಲ ಎರಡು ಓವರ್‌ಗಳಲ್ಲಿ ತನ್ನ ಆರಂಭಿಕರಾದ ಶೇನ್ ವಾಟ್ಸನ್ ಮತ್ತು ಮುರಳಿ ವಿಜಯ್ ಅವರನ್ನು 6 ರನ್ನುಗಳಿಗೆ ಕಳೆದುಕೊಂಡರೂ, ರಾಯಡು ಮತ್ತು ಪಾಫ್ ಡುಪ್ಲೆಸಿಸ್ ಬರೋಬ್ಬರಿ ಶತಕದ ಜತೆಯಾಟದ ಮೂಲಕ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ...

ಊಟ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಿತ್ತು ಚಾಟಿ ಏಟು

newsics.com ಹಾವೇರಿ : ಊಟ ಕೇಳಿದ ವಿಧ್ಯಾರ್ಥಿಗಳಿಗೆ ವಾರ್ಡನ್ ಚಾಟಿ ಏಟು ಕೊಟ್ಟಿರುವಂತಹ ಅಮಾನವೀಯ ಘಟನೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ...

ಹೊತ್ತಿ ಉರಿದ ಕಾರು – ಟಿಪ್ಪರ್ : ಇಬ್ಬರು ಸಜೀವ ದಹನ

Newsics.com ಬೆಳಗಾವಿ : ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಬಾಲಕಿ ಸೇರಿ ಇಬ್ಬರು ಸಜೀವ ದಹನವಾದರೆ ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ...
- Advertisement -
error: Content is protected !!