Monday, August 8, 2022

ಐಪಿಎಲ್: ಹೈದರಾಬಾದ್‌ ವಿರುದ್ಧ ಚೆನ್ನೈಗೆ ಸೋಲು

Follow Us

newsics.com
ದುಬೈ: ಐಪಿಎಲ್‌ ಮುಖಾಮುಖಿಯಲ್ಲಿ ಹೈದರಾಬಾದ್‌ ತಂಡದ ದಾಳಿ ಎದುರಿಸುವಲ್ಲಿ ವಿಫಲವಾದ ಚೆನ್ನೈ ತಂಡ ಶುಕ್ರವಾರ 7 ರನ್ ಗಳಿಂದ ಪರಾಜಯಗೊಂಡಿದೆ.
ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವಾರ್ನರ್‌ ಬಳಗ 20 ಓವರ್ ಗೆ 5 ವಿಕೆಟ್ ಕಳೆದುಕೊಂಡು 164 ರನ್‌ ಗಳಿಸಿತ್ತು. ಈ ಸವಾಲಿನ ಮೊತ್ತ ಬೆನ್ನತ್ತಿದ ಧೋನಿ ಬಳಗ 5 ವಿಕೆಟ್ ಕಳೆದುಕೊಂಡು 157 ರನ್ ಕಲೆ ಹಾಕಿ ಸೋಲಿಗೆ ಶರಣಾಯಿತು.
ಚೆನ್ನೈ ಆಟಗಾರರನ್ನು ಕಟ್ಟಿಹಾಕುವಲ್ಲಿ ಸಫಲರಾದ ಹೈದರಾಬಾದ್‌ ಬೌಲರ್ ಗಳು ವಿಕೆಟ್ ಉರುಳಿಸುತ್ತಾ ಹೋದರು. ಇದರಿಂದ ಒತ್ತಡಕ್ಕೆ ಸಿಲುಕಿದ ಚೆನ್ನೈ 157 ರನ್ ಗೆ 5 ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು.
ಫಾಫ್ ಡು ಪ್ಲೆಸಿಸ್ (22) ಶೇನ್ ವ್ಯಾಟ್ಸನ್ (1), ಅಂಬಾಟಿ ರಾಯುಡು (8), ಕೇದಾರ್ ಜಾಧವ್ (3) ರನ್ ಗೆ ವಿಕೆಟ್ ಒಪ್ಪಿಸಿ ಹೈದರಾಬಾದ್‌ ಬೌಲರ್ ಗಳ ಎದುರು ಸಿಡಿದು ನಿಲ್ಲಲು ವಿಫಲರಾದರು. ಜಡೇಜಾ (50) ವಿಕೆಟ್ ನೀಡಿದರು. ಧೋನಿ (47), ಸ್ಯಾಮ್ ಕರ್ರನ್(15) ರನ್ ಗಳಿಸಿದರು.

ಹೆರಾಯಿನ್ ಮಾರುತ್ತಿದ್ದ ಇಬ್ಬರು ಪೆಡ್ಲರ್’ಗಳ ಬಂಧನ

ಮತ್ತಷ್ಟು ಸುದ್ದಿಗಳು

vertical

Latest News

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

newsics.com ಬೆಂಗಳೂರು: ನಗರದ ಪ್ರತಿಷ್ಟಿತ ಪಬ್ ನಲ್ಲಿ  ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಗೆಳೆಯರು ಗಲಾಟೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಬ್ಬನ್ ಪಾರ್ಕ್  ಠಾಣೆ...

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಕಸರತ್ತು

newsics.com ಪಾಟ್ನ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಮೈತ್ರಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಸಂಯುಕ್ತ ಜನತಾ ದಳದ ಮಹತ್ವದ ಚರ್ಚೆ ಪಾಟ್ನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ  ಜೆಡಿಯುವಿನ ಸಂಸದರು, ಶಾಸಕರು  ಸೇರಿದಂದೆ...

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಹತ್ಯೆ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ...
- Advertisement -
error: Content is protected !!