Thursday, December 8, 2022

ತಿರುವನಂತಪುರಂ ನಲ್ಲಿ ಇರಾನಿ ಗ್ಯಾಂಗ್ ತಂಡದ ನಾಲ್ವರ ಬಂಧನ

Follow Us

Newsics.com

ತಿರುವನಂತಪುರಂ:  ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ನಡೆದ ಹಲವು ದರೋಡೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿರುವ ಇರಾನಿ ಗ್ಯಾಂಗ್ ತಂಡದ ನಾಲ್ವರನ್ನು ತಿರುವನಂತಪುರಂ ನಲ್ಲಿ ಬಂಧಿಸಲಾಗಿದೆ.

ನಗರದ ವಸತಿ ಗೃಹವೊಂದರಲ್ಲಿ ತಂಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ವೀಸಾ ಕಾನೂನು ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಮೊದಲು ವಶಕ್ಕೆ ತೆಗೆದುಕೊಳ್ಳಲಾಯಿತು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು, ಕುಖ್ಯಾತ ಇರಾನ್ ಗ್ಯಾಂಗ್ ಸದಸ್ಯರು ಎಂಬುದು ದೃಢಪಟ್ಟಿತ್ತು.

ನೇಪಾಳ ಮೂಲಕ ಈ ತಂಡದ ಸದಸ್ಯರು ಭಾರತಕ್ಕೆ ಆಗಮಿಸಿದ್ದರು. ಬಂಧಿತ ಆರೋಪಿಗಳು ಬೃಹತ್ ತಂಡದ ಸದಸ್ಯರಾಗಿದ್ದು, ಇತರರು ಈಗಲೂ ದೇಶದ ವಿವಿಧೆಡೆ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದಾರೆ ಎಂದು ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೂಡ ಈ ತಂಡ ದರೋಡೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!