ನವದೆಹಲಿ: ಇರಾನ್ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ತೀರಾ ಅಗತ್ಯವಲ್ಲದ ಪ್ರವಾಸಗಳನ್ನು ಕೈಗೊಳ್ಳದಂತೆ ಕೇಂದ್ರ ವಿದೇಶಾಂಗ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ.
“ಇರಾನ್ ನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ಮುಂದಿನ ಅಧಿಸೂಚನೆ ಹೊರಬೀಳುವವರೆಗೆ ಆ ದೇಶಕ್ಕೆ ಅತ್ಯವಶ್ಯವಲ್ಲದ ಪ್ರಯಾಣ ಕೈಗೊಳ್ಳಬಾರದು. ಇರಾನ್ ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದಿರಬೇಕು ಮತ್ತು ದೇಶದೊಳಗೆ ಪ್ರಯಾಣ ಮಾಡುವುದನ್ನು ತಡೆಹಿಡಿಯಬೇಕು” ಎಂದು ಸಚಿವಾಲಯ ಸಲಹೆ ನೀಡಿದೆ.
ಇರಾನ್ ಗೆ ಅತ್ಯವಶ್ಯವಲ್ಲದ ಪ್ರಯಾಣ ಬೇಡ; ವಿದೇಶಾಂಗ ಇಲಾಖೆ ಸೂಚನೆ
Follow Us