Newsics.com
ಕೋಲ್ಕತ್ತಾ: ಬಾಂಗ್ಲಾದೇಶದಲ್ಲಿ ದಸರಾ ಹಬ್ಬದ ವೇಳೆ ಇಸ್ಕಾನ್ ದೇವಾಲಯದ ಮೇಲೆ ನಡೆದ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಸಂಬಂಧ ಇಸ್ಕಾನ್ ಸಂಸ್ಥೆ ವಿಶ್ವ ಸಂಸ್ಥೆಗೆ ದೂರು ನೀಡಿದೆ.
ಅಂತಾರಾಷ್ಟ್ರೀಯ ಸಮುದಾಯ ಇಸ್ಕಾನ್ ದೇವಾಲಯದ ಮೇಲೆ ನಡೆದ ದಾಳಿಯನ್ನು ಖಂಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಇಸ್ಕಾನ್ ಉಪಾಧ್ಯಕ್ಷ ರಾಧಾ ರಮಣ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಢಾಕಾದಲ್ಲಿ ಮಾತನಾಡಿದ ಬಾಂಗ್ಲಾ ಗೃಹ ಸಚಿವ ದಾಳಿ ಪೂರ್ವ ಯೋಜಿತ ಸಂಚು ಎಂದು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಕೋಮು ಸಂಘರ್ಷ ಹುಟ್ಟು ಹಾಕಲು ವಿಧ್ವಂಸಕ ಶಕ್ತಿಗಳು ಯತ್ನಿಸುತ್ತಿವೆ ಎಂದು ಬಾಂಗ್ಲಾ ಸರ್ಕಾರ ಆರೋಪ ಮಾಡಿದೆ.