Wednesday, October 28, 2020

ಐಸಿಸ್ ಪಿತೂರಿ ಪ್ರಕರಣ; ದೆಹಲಿಯ ಎನ್‌ಐಎ ಕೋರ್ಟ್’ನಿಂದ 15 ದೋಷಿಗಳಿಗೆ ಶಿಕ್ಷೆ

newsics.com
ನವದೆಹಲಿ: ಐಸಿಸ್ ಪಿತೂರಿ ಪ್ರಕರಣದ 15 ದೋಷಿಗಳಿಗೆ ದೆಹಲಿಯ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ನ್ಯಾಯಾಲಯ 5ರಿಂದ 10 ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 38.000 ರೂ. ನಿಂದ 1.3 ಲಕ್ಷ ರೂ. ವರೆಗೆ ದಂಡ ವಿಧಿಸಿದೆ.
ಸಿರಿಯಾ ಮೂಲದ ಐಸಿಸ್ ಮಾಧ್ಯಮ ವರಿಷ್ಠ ಯೂಸುಫ್-ಅಲ್-ಹಿಂದಿ ಭಯೋತ್ಪಾದನೆ ಸಂಘಟನೆಗಾಗಿ ಕೆಲಸ ಮಾಡಲು ಹಾಗೂ ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಭಾರತೀಯ ಮುಸ್ಲಿಮರನ್ನು ನೇಮಕಗೊಳಿಸಲು ಪಿತೂರಿ ನಡೆದಿತ್ತು. ಐಸಿಸ್ ಪಿತೂರಿ ಪ್ರಕರಣದ 15 ಮಂದಿ ದೋಷಿಗಳಿಗೆ ದೆಹಲಿ ನ್ಯಾಯಾಲಯ ಶುಕ್ರವಾರ ಶಿಕ್ಷೆ ಘೋಷಿಸಿತು ಎಂದು ಎನ್‌ಐಎಯ ವಕ್ತಾರರು ತಿಳಿಸಿದ್ದಾರೆ.
ಐಎಸ್‌ಐಎಸ್ ನಡೆಸಿದ ಪಿತೂರಿ ಆರೋಪದಲ್ಲಿ ಎನ್‌ಐಎ 2015 ಡಿಸೆಂಬರ್ 9ರಂದು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ತನಿಖೆಯ ಸಂದರ್ಭ ದೇಶಾದ್ಯಂತದ ವಿವಿಧ ನಗರಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಹಾಗೂ 19 ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಅಪರೂಪದ ಧಾಮ; ಶೋಷಿತ ಪತಿಯರಿಗಾಗಿ ಈ ಆಶ್ರಮ!

ಕರಾವಳಿಯಲ್ಲಿ ನಾಳೆ ಮಳೆ; ಅ.25ರಂದು 8 ಜಿಲ್ಲೆಗಳಲ್ಲಿ ಭಾರೀ ವರ್ಷಧಾರೆ

ಐಎಂಎ ಬಹುಕೋಟಿ ರೂ. ವಂಚನೆ ಕೇಸ್; ಸಿಬಿಐನಿಂದ 28 ಮಂದಿ ವಿರುದ್ಧ ಪೂರಕ ಚಾರ್ಜ್​​ಶೀಟ್​

3 ದಿನದಲ್ಲಿ 40 ಪಾಕ್ ಯೋಧರ ಹತ್ಯೆ

ದೇಶದಲ್ಲಿ ಸ್ಪುಟ್ನಿಕ್ V ಕ್ಲಿನಿಕಲ್ ಟ್ರಯಲ್’ಗೆ ಡಿಸಿಜಿಐ ಅನುಮತಿ

ಬೆಂಗಳೂರು ಐಎಎಫ್ ಆಸ್ಪತ್ರೆಗೆ ಅತ್ಯುತ್ತಮ ಕಮಾಂಡ್ ಆಸ್ಪತ್ರೆ ಪ್ರಶಸ್ತಿ

ದಿನನಿತ್ಯದ ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿದೆ – ಪ್ರಧಾನಿ

ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಅತ್ಯಾಚಾರ ಕೇಸ್

ಕೊರೋನಾ ಸೋಂಕಿತರು, ಗುಣಮುಖರಾದವರಲ್ಲಿ ಪಾರ್ಶ್ವವಾಯು ಸಮಸ್ಯೆ

ಮಾರ್ಚ್ ವೇಳೆಗೆ ಕೋವಿಡ್ -19 ಲಸಿಕೆ ಲಭ್ಯ- ಡಾ. ಸುರೇಶ್ ಜಾಧವ್

ಚಿರಂಜೀವಿ ಸರ್ಜಾ ನಟನೆಯ ಕ್ಷತ್ರಿಯ ಚಿತ್ರದ ಟೀಸರ್ ರಿಲೀಸ್

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

Newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್  ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!