Friday, May 20, 2022

ಐಸಿಸ್ ಸದಸ್ಯ ಹಾಜಾ ತಪ್ಪಿತಸ್ಥ; ಕೊಚ್ಚಿ ಕೋರ್ಟ್ ತೀರ್ಪು

Follow Us

newsics.com
ಕೊಚ್ಚಿ: ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ಉದ್ದೇಶದಿಂದ ಐಸಿಎಸ್ ಸಂಘಟನೆಯಿಂದ 2015 ರಲ್ಲಿ ಇರಾಕ್‍ನಲ್ಲಿ ತರಬೇತಿ ಪಡೆದಿದ್ದ ಭಾರತೀಯ ಪ್ರಜೆ ಹಾಜಾ ಮೋಯ್ದಿನ್ ಅವರನ್ನು ತಪ್ಪಿತಸ್ಥ ಎಂದು ಕೊಚ್ಚಿ ನ್ಯಾಯಾಲಯ ಆದೇಶ ನೀಡಿದೆ.
ಕಳೆದ ನಾಲ್ಕು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೊಚ್ಚಿ ನ್ಯಾಯಾಲಯ ಮೋಯ್ದಿನ್‍ನನ್ನು ತಪ್ಪಿತಸ್ಥ ಎಂದಿದ್ದು, ಆತನ ವಿರುದ್ಧ ಕ್ರಿಮಿನಲ್ ಪಿತೂರಿ, ಕಾನೂನುಬಾಹಿರ ಚಟುವಟಿಕೆ ಸೇರಿದಂತೆ ಹಲವು ಆರೋಪಗಳು ಸಾಬೀತಾಗಿವೆ.
ರಾಷ್ಟ್ರೀಯ ತನಿಖಾ ತಂಡ ಸಲ್ಲಿಸಿದ ಚಾರ್ಜಶೀಟ್ ಅನ್ವಯ ಕೇರಳ ಜಿಲ್ಲೆಯ ಇಡುಕ್ಕಿಯವನಾದ ಮೋಯ್ದಿನ್, ಉದ್ದೇಶಪೂರ್ವಕವಾಗಿ ಏಪ್ರಿಲ್ 2015 ರಲ್ಲಿ ಐಸಿಸ್ ಸದಸ್ಯನಾಗಿದ್ದು, ಇರಾಕ್‍ಗೆ ತೆರಳಿ ಅಲ್ಲಿ ಭಯೋತ್ಪಾದಕ ಚಟುವಟಿಕೆಯ ತರಬೇತಿ ಪಡೆದಿದ್ದ ಎಂದು ಆರೋಪಿಸಲಾಗಿತ್ತು. ಈತ ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸೋಷಿಯಲ್ ಮೀಡಿಯಾಗಳ ನೆರವನ್ನು ಪಡೆದುಕೊಂಡಿದ್ದ ಎನ್ನಲಾಗಿದೆ. ಅಲ್ಲದೇ ಉದ್ದೇಶಪೂರ್ವಕವಾಗಿಯೇ ತಾನು ಉಗ್ರಗಾಮಿಗಳ ಜೊತೆ ಸಂವಹನ ನಡೆಸಿದ್ದನ್ನು ಈತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ.

ಮತ್ತಷ್ಟು ಸುದ್ದಿಗಳು

Latest News

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು, ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

newsics.com ಗದಗ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು ಹಾಗೂ ಅದರಲ್ಲಿದ್ದ ನಾಲ್ವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ಶುಕ್ರವಾರ...

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ...

ಮತ್ತೆ ಚಿನ್ನ, ಬೆಳ್ಳಿ ದುಬಾರಿ

newsics.com ಬೆಂಗಳೂರು: ಶುಕ್ರವಾರ (ಮೇ 20) ಚಿನ್ನ, ಬೆಳ್ಳಿ ಮತ್ತೆ ದುಬಾರಿಯಾಗಿದೆ. 10 ಗ್ರಾಂ ಚಿನ್ನಕ್ಕೆ 640 ರೂ. ಹೆಚ್ಚಳವಾಗಿದೆ. ಬೆಳ್ಳಿ 1 ಕೆಜಿಗೆ ಬರೋಬ್ಬರಿ 900 ರೂ. ಏರಿಕೆಯಾಗಿದೆ. ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ...
- Advertisement -
error: Content is protected !!