newsics.com
ಶ್ರೀಹರಿಕೋಟಾ: ಭಾರತದ ಭೂ ಭಾಗದ ಅಧ್ಯಯನ ನಡೆಸಲು ಇಸ್ರೋ ಉಡಾಯಿಸಿದ ಇಒಎಸ್- 3 ಉಪಗ್ರಹ ಗುರಿ ತಲುಪುವಲ್ಲಿ ವಿಫಲವಾಗಿದೆ.
ಕೊನೆಯ ಹಂತದಲ್ಲಿ ಕ್ರಯೋಜೆನಿಕ್ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಹಿನ್ನೆಡೆ ಉಂಟಾಗಿದೆ.
ಕೊರೋನಾ ಮಹಾ ಮಾರಿ ಕಾರಣದಿಂದಾಗಿ ಉಪಗ್ರಹ ಉಡಾವಣೆ ವಿಳಂಬವಾಗಿತ್ತು.
ಚಂಡಮಾರುತದ ಮುನ್ಸೂಚನೆ, ಸಾಗರದ ಅಲೆಗಳ ಸ್ವರೂಪದಲ್ಲಿನ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಪಗ್ರಹ ನೆರವು ನೀಡುವ ಸಾಧ್ಯತೆ ಇತ್ತು.