newsics.com
ನವದೆಹಲಿ: ಚಂದ್ರಯಾನ-2 ಗಗನನೌಕೆಯ ಲ್ಯಾಂಡರ್ ತನ್ನ ವೈಜ್ಞಾನಿಕ ಉಪಕರಣಗಳ ಮೂಲಕ ಚಂದ್ರನ ನೆಲದ ಮೇಲೆ ನೀರಿನಂಶ ಇರುವುದನ್ನು ಪತ್ತೆ ಮಾಡಿದೆ.
ಲ್ಯಾಂಡರ್ ಚಂದ್ರನ ಮೇಲೆ ಅಪ್ಪಳಿಸಿ ಪತನಗೊಂಡಿದ್ದರೂ ಚಂದ್ರನ ಸುತ್ತ ಸುತ್ತುತ್ತಿರುವ ಇನ್ ಫ್ರಾರೆಡ್ ಸ್ಪೆಕ್ಟ್ರೊಮೀಟರ್ ಉಪಕರಣ ಹೈಡ್ರಾಕ್ಸಿಲ್ ಮತ್ತು ನೀರಿನ ಕಣ (H2O)ಗಳನ್ನು ಚಂದಿರನ ಅಂಗಳದಲ್ಲಿ ಪತ್ತೆ ಮಾಡಿದೆ ಎಂಬುದು ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರ ಲೇಖನದಲ್ಲಿ ಬಹಿರಂಗಗೊಂಡಿದೆ.
ಇದು 2022ರ ಇಸ್ರೋದ ಚಂದ್ರಯಾನ -3ಕ್ಕೆ ಹೊಸ ಭರವಸೆ ನೀಡಿದೆ.
ಚಂದ್ರಯಾನ- 2 ಅನ್ನು ಜುಲೈ 22, 2019 ರಂದು ಉಡಾವಣೆ ಮಾಡಲಾಗಿತ್ತು. ಆದರೆ ಲ್ಯಾಂಡರ್ ಚಂದ್ರನ ಮೇಲ್ಮೈನಿಂದ ಕೇವಲ 2.1 ಕಿ.ಮೀ. ದೂರವಿದ್ದಾಗ ನಿಯಂತ್ರಣ ಕಳೆದುಕೊಂಡಿತ್ತು.
ಅಂತ್ಯಕ್ರಿಯೆಗೆ ಹಣವಿಲ್ಲವೆಂದು ಫ್ರಿಡ್ಜ್’ನಲ್ಲಿ ಅಜ್ಜನ ಮೃತದೇಹ ಬಚ್ಚಿಟ್ಟ ಮೊಮ್ಮಗ