newsics.com
ಮುಂಬೈ: ಎನ್’ಸಿಪಿ ನಾಯಕ ಶರದ್ ಪವಾರ್’ಗೆ ಆದಾಯ ತೆರಿಗೆ ಇಲಾಖೆ ಮಂಗಳವಾರ ನೋಟಿಸ್ ನೀಡಿದೆ.
ಚುನಾವಣಾ ಆಯೋಗದ ಸೂಚನೆಯಂತೆ ಐಟಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಚುನಾವಣೆ ವೇಳೆ ಶರದ್ ಪವಾರ್ ಸಲ್ಲಿಸಿದ್ದ ಕೆಲ ಮಾಹಿತಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ಕೆಲ ದಾಖಲೆ ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆ ಪವಾರ್’ಗೆ ನೋಟಿಸ್ ನೀಡಿದೆ ಎನ್ನಲಾಗಿದೆ.
ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದನ್ನು ಶರದ್ ಪವಾರ್ ದೃಢಪಡಿಸಿದ್ದು, ಕೇಂದ್ರಕ್ಕೆ ನಮ್ಮ ಬಗ್ಗೆ ವಿಶೇಷ ಪ್ರೀತಿ ಇದ್ದಂತಿದೆ ಎಂದು ಕೇಂದ್ರದ ವಿರುದ್ಧ ಟೀಕಿಸಿದ್ದಾರೆ. ಅಲ್ಲದೆ, ಐಟಿ ಕಚೇರಿಗೆ ತೆರಳಿ ಅಗತ್ಯ ದಾಖಲೆ ಸಲ್ಲಿಸುವುದಾಗಿ ಪವಾರ್ ಹೇಳಿದ್ದಾರೆ.
ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಸಚಿವ ಆದಿತ್ಯ ಠಾಕ್ರೆಗೂ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದನ್ನು ಪವಾರ್ ಖಚಿತಪಡಿಸಿದ್ದಾರೆ.
ಎನ್’ಸಿಪಿ ನಾಯಕ ಶರದ್ ಪವಾರ್’ಗೆ ಐಟಿ ನೋಟಿಸ್
Follow Us