ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ . ಪಿ. ನಡ್ಡಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ವೀಟರ್ ನಲ್ಲಿ ರಾಹುಲ್ ಗಾಂಧಿ ಅವರ ವರ್ತನೆ ಮತ್ತು ಧೋರಣೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸಂಸತ್ತಿನ ರಕ್ಷಣೆ ಕುರಿತಾದ ಸ್ಥಾಯಿ ಸಮಿತಿ ಸದಸ್ಯರಾಗಿದ್ದರೂ ಒಂದೇ ಒಂದು ಸಭೆಗೆ ರಾಹುಲ್ ಗಾಂಧಿ ಹಾಜರಾಗಿರಲಿಲ್ಲ.
ಇದೀಗ ಸತತವಾಗಿ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸುವ ಮಾತನ್ನಾಡುತ್ತಿದ್ದಾರೆ. ಸೈನಿಕರ ಸಾಹಸದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಜವಾಬ್ದಾರಿಯುತ ಪ್ರತಿಪಕ್ಷ ನಾಯಕರಾಗಿ ಏನನ್ನು ರಾಹುಲ್ ಗಾಂಧಿ ಮಾಡಬಾರದಿತ್ತೊ ಅದನ್ನೆಲ್ಲ ಇದೀಗ ರಾಹುಲ್ ಮಾಡುತ್ತಿದ್ದಾರೆ ಎಂದು ಜೆ ಪಿ ನಡ್ಡಾ ಆರೋಪಿಸಿದ್ದಾರೆ.
ಲಡಾಕ್ ಪರಿಸ್ಥಿತಿ ಕುರಿತು ರಾಹುಲ್ ಗಾಂಧಿ ಮಾಡಿದ ಸರಣಿ ಟೀಕೆಗಳಿಗೆ ನಡ್ಡಾ ಈ ಮೂಲಕ ಉತ್ತರಿಸಿದ್ದಾರೆ.