Thursday, October 29, 2020

ಮೋದಿ, ಅಮಿತ್ ಶಾ ಇಬ್ಬರಿಗೂ ಪರಮಾಪ್ತ: ಜೆ ಪಿ ನಡ್ಡಾ ಮುಂದಿದೆ ಗಂಭೀರ ಸವಾಲು

ನವದೆಹಲಿ:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕ ಜೆ ಪಿ ನಡ್ಡಾ ಆಯ್ಕೆ ಬಹುತೇಕ ಖಚಿತವಾಗಿದೆ.ನಾಳೆ ನಾಮಪತ್ರ ,ಸಲ್ಲಿಸಲಿರುವ ನಡ್ಡಾ ಜನವರಿ 22 ರಂದು ಪಕ್ಷದ ನೇತೃತ್ವ ವಹಿಸಲಿದ್ದಾರೆ. ಬಹುತೇಕ ಅವಿರೋಧ ಆಯ್ಕೆ ನಡೆಯಲಿದೆ. 1960 ಡಿಸೆಂಬರ್ 2 ರಂದು ಜನನ. ಎಬಿವಿಪಿ ಮೂಲಕ ರಾಜಕೀಯ ಅಂಗಳ ಪ್ರವೇಶ. 1978ರಲ್ಲಿ ಎಬಿವಿಪಿ ನಾಯಕನಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದ ಹೆಗ್ಗಳಿಕೆ.  ರಾಜಕೀಯ ಶಾಸ್ತ್ರದಲ್ಲಿ  ಎಂ. ಎ ಪದವಿ. ಜೊತೆಗೆ ಎಲ್ ಎಲ್ ಬಿ . ಇದು ಶೈಕ್ಷಣಿಕ ಅರ್ಹತೆ. ಪತ್ನಿ  ಮಲ್ಲಿಕಾ ನಡ್ಡಾ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.  ಹಿಮಾಚಲ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ತೆರೆಯ ಹಿಂದೆ ನಿಂತು ನಡ್ಡಾ ವಹಿಸಿದ್ದ ಪಾತ್ರ ಅಮೋಘ. ಇದು ಅವರಲ್ಲಿದ್ದ ಸಂಘಟನಾ ಕೌಶಲ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿತ್ತು.  ನಿತೀನ್ ಗಡ್ಕರಿ ಮತ್ತು ಅಮಿತ್ ಶಾ ಜೊತೆ ಪಕ್ಷದ ಸಂಘಟನಾ  ಕಾರ್ಯ ಚಟುವಟಿಕೆಯ ಅನುಭವಹೊಂದಿದ್ದಾರೆ. ಜೆ . ಪಿ. ನಡ್ಡಾ ಅವರ ಮುಂದೆ ದೆಹಲಿ ವಿಧಾನಸಭಾ ಚುನಾವಣೆಯ ಗಂಭೀರ ಸವಾಲಿದೆ. ಇಲ್ಲಿ ಆಮ್ ಆದ್ಮಿ ಪಕ್ಷದ ಹವಾ ಜೋರಾಗಿದೆ. ಸತತ ಸೋಲಿನ ಸರಪಳಿಯನ್ನು ತುಂಡರಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಕಮಲ ಪಡೆ ಸಿಲುಕಿದೆ. ಇಲ್ಲಿ ನಡ್ಡಾ ಯಶಸ್ವಿಯಾದರೆ, ಅವರ ರಾಜಕೀಯ ಅಭಿಯಾನ ಸರಿಯಾದ ಹಾದಿಯಲ್ಲಿ ಅಡೆ ತಡೆ ಇಲ್ಲದೆ ಸಾಗಲಿದೆ. ಇಲ್ಲದಿದ್ದರೆ  ಅಪಸ್ವರದ ಕೂಗು ಕೇಳಿಸಲಿದೆ.

ಮತ್ತಷ್ಟು ಸುದ್ದಿಗಳು

Latest News

ವಿಶ್ವದಲ್ಲಿ ಮತ್ತೆ ಕೊರೋನಾ ಪ್ರಮಾಣ ಹೆಚ್ಚಳ- WHO ಕಳವಳ

newsics.comನವದೆಹಲಿ: ಜಗತ್ತಿನ ವಿವಿಧ ದೇಶಗಳಲ್ಲಿ ಕಳೆದೊಂದು ವಾರದಲ್ಲಿ 2 ಮಿಲಿಯನ್ ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣ...

ಎಡನೀರು ಮಠದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮೀಜಿ ಪೀಠಾರೋಹಣ

newsics.com ಕಾಸರಗೋಡು:  ಕೇರಳದ ಕಾಸರಗೋಡು ಸಮೀಪದ ಎಡನೀರು ಮಠದ ನೂತನ ಮಠಾಧಿಪತಿ ಸಚ್ಚಿದಾನಂದ ಭಾರತಿ ಸ್ವಾಮೀಜಿ  ಅವರ ಪೀಠಾರೋಹಣ ಸಮಾರಂಭ ಇಂದು ನಡೆಯಿತು. ಕರ್ನಾಟಕದ ಹಲವು ಮಠಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಮತ್ತು ಗಣ್ಯರು ಈ...

ಇರಾನ್’ನಲ್ಲಿ ಭೂಗರ್ಭ ಅಣ್ವಸ್ತ್ರ ಘಟಕ; ಹೆಚ್ಚಿದ ಆತಂಕ

newsics.comದುಬೈ: ಇರಾನ್ ಭೂಗರ್ಭ ಅಣ್ವಸ್ತ್ರ ತಯಾರಿಕಾ ಘಟಕವನ್ನು ಆರಂಭಿಸಿದ್ದು, ಏಷ್ಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಯಾಗಿದೆ.ನಟಾಂಝ್ ಪ್ರದೇಶದಲ್ಲಿ ಇರಾನ್‍ ತನ್ನ ಅಣ್ವಸ್ತ್ರಗಳ ತಯಾರಿಕಾ ಘಟಕ ಆರಂಭಿಸಿರುವುದನ್ನು ಉಪಗ್ರಹ ಚಿತ್ರಗಳು...
- Advertisement -
- Advertisement -
error: Content is protected !!