newsics.com
ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಮೂರನೆ ಬಾರಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.
ಜಾಕ್ವೆಲಿನ್ ನಿರಂತರವಾಗಿ ವಿಚಾರಣೆಗೆ ಗೈರು ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಇ ಡಿ ಚಿಂತನೆ ನಡೆಸಿದೆ. ಜಾಕ್ವೆಲಿನ್ ಬಂಧನಕ್ಕೆ ಒಳಗಾಗುವ ಸಾಧ್ಯತೆ ಕೂಡ ಇದೆ.
ಈ ಮಧ್ಯೆ ನಟಿ ನೋರಾ ಫತೇಹಿಗೆ ಇ ಡಿ ನೋಟಿಸ್ ಕುರಿತಂತೆ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ ಆರೋಪಿಯಲ್ಲ. ಬದಲಾಗಿ ಸಾಕ್ಷಿಯಾಗಿದ್ದಾರೆ ಎಂದು ಅವರ ಮ್ಯಾನೇಜರ್ ಹೇಳಿದ್ದಾರೆ.
ಜಾಕ್ವೆಲಿನ್ ಇತ್ತೀಚೆಗೆ ಮುಂಬೈನಲ್ಲಿ 250 ಕೋಟಿ ರೂಪಾಯಿ ಮೌಲ್ಯದ ಬಂಗ್ಲೆ ಖರೀದಿಸಿದ್ದರಂತೆ. ಅವರ ಸಂಪತ್ತಿನ ಮೂಲದ ಬಗ್ಗೆ ಈ ವೇಳೆ ಗುಸು ಗುಸು ಚರ್ಚೆ ಆರಂಭವಾಗಿತ್ತು.