Sunday, July 3, 2022

ನಿರ್ಮಾಣಗೊಳ್ಳಲಿದೆ ಜಗನ್ ಟೆಂಪಲ್!

Follow Us

ಹೈದರಾಬಾದ್: ತಮ್ಮ ನೆಚ್ಚಿನ ನಾಯಕನಿಗಾಗಿ ದೇವಾಲಯ ನಿರ್ಮಿಸುವ ಟ್ರೆಂಡ್ ಈಗ ಸಾಮಾನ್ಯವಾಗಿದೆ. ಈ ಸಾಲಿಗೆ ಇದೀಗ ಆಂಧ್ರಪ್ರದೇಶದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ‌.
ಮೊದಲ ಬಾರಿಗೆ ಸಿಎಂ ಆಗಿರೋ ಜಗನ್ ನೂರಾರು ಜನಪರ ಯೋಜನೆಗಳಿಂದ ಜನಮನ್ನಣೆ ಗಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರಿಗಾಗಿ ದೇವಾಲಯ ನಿರ್ಮಿಸಲು ಮುಂದಾಗಿದ್ದಾರೆ‌.
ಜಗನ್ ಗೆ ದೇವಾಲಯ ನಿರ್ಮಿಸಲು ಈಗಾಗಲೇ ಸ್ಥಳದ ಆಯ್ಕೆ ಕೂಡ ನಡೆದಿದ್ದು, ಪಶ್ಚಿಮ ಗೋದಾವರಿ ತೀರದ ‌ಗೋಪಾಲಪುರಂ ಮಂಡಲದ ರಾಜಂಪಾಳೆಯಲ್ಲಿ ಜಾಗ ಗುರುತಿಸಲಾಗಿದೆ.
ಸೆಪ್ಟೆಂಬರ್’ನಲ್ಲಿ ಇಲ್ಲಿ ಭೂಮಿ ಪೂಜೆ ನಡೆಯಲಿದ್ದು, ಗೋಪಾಲಪುರಂನ ಶಾಸಕ ತಲಾರಿ ವೆಂಕಟರಾವ್ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ವೈಸಿಪಿ ನಾಯಕ ಕುರಕುರಿ ನಾಗೇಶ್ವರರಾವ್ ಮಾಹಿತಿ ನೀಡಿದ್ದಾರೆ.
ದೇಗುಲ ನಿರ್ಮಾಣದ ಬಳಿಕ ಇಲ್ಲಿ ಜಗನ್ ಪ್ರತಿಮೆ ಸ್ಥಾಪಿಸಲಿದ್ದು, ಹಿಂದೂ ಸಂಪ್ರದಾಯದಂತೆ ಪೂಜಾವಿಧಿಗಳು ನಡೆಯಲಿದೆ ಎಂದು ಕುರಕುರಿ ನಾಗೇಶ್ವರ ರಾವ್ ಹೇಳಿದ್ದಾರೆ.
ಜಗನ್ ಪ್ರಸ್ತುತ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದರೂ ಹಿಂದೂ ಸಂಪ್ರದಾಯದಂತೆ ಪೂಜೆ ನಡೆಸಲು ಅಭಿಮಾನಿಗಳು ನಿರ್ಧರಿಸಿದ್ದಾರಂತೆ.
ಇದಕ್ಕೂ ಮುನ್ನ ಜಗನ್ ತಂದೆ ದಿ.ವೈಎಸ್ ಆರ್ ಗೂ ಅಭಿಮಾನಿಗಳು ವಿಶಾಕಪಟ್ಟಣಂನಲ್ಲಿ ದೇವಾಲಯ ನಿರ್ಮಿಸಿದ್ದು, ಪೂಜೆ ನಡೆಯುತ್ತಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!