Sunday, May 29, 2022

ಜೆಇಇ ಮುಖ್ಯ ಪರೀಕ್ಷೆ ರಿಸಲ್ಟ್; 24 ಅಭ್ಯರ್ಥಿಗಳಿಗೆ ಶೇ.100 ಅಂಕ

Follow Us

newsics.com
ನವದೆಹಲಿ:
ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, 24 ಅಭ್ಯರ್ಥಿಗಳು ಶೇ.100ರಷ್ಟು ಅಂಕ ಗಳಿಸಿದ್ದಾರೆ.
ಶೇ.100ರಷ್ಟು ಅಂಕ ಪಡೆದವರ ಪಟ್ಟಿಯಲ್ಲಿ ತೆಲಂಗಾಣ (8 ಅಭ್ಯರ್ಥಿಗಳು) ಮೊದಲ ಸ್ಥಾನದಲ್ಲಿದ್ದರೆ, ದೆಹಲಿ (5) ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ (4), ಆಂಧ್ರಪ್ರದೇಶ (3), ಹರಿಯಾಣ (2) ಮತ್ತು ಗುಜರಾತ್ ಹಾಗೂ ಮಹಾರಾಷ್ಟ್ರದ ತಲಾ ಒಬ್ಬ ಅಭ್ಯರ್ಥಿ ಶೇ.100 ಅಂಕ ಪಡೆದಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಎರಡು ಬಾರಿ ಮುಂದೂಡಿಕೆಯಾಗಿದ್ದ ಜೆಇಇ ಪರೀಕ್ಷೆ ಅಂತಿಮವಾಗಿ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 6 ರವರೆಗೆ ದೇಶದ 233 ನಗರಗಳ 660 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ತಾಣಗಳಾದ jeemain.nta.nic.in ಅಥವಾ jeemain.nic.in ನಲ್ಲಿ ಪರಿಶೀಲಿಸಬಹುದು.

ಮತ್ತಷ್ಟು ಸುದ್ದಿಗಳು

Latest News

ಪೋಲೀಸ್ ಠಾಣೆಗಳಲ್ಲಿ ಸಿಸಿಟಿವಿ ಆಡಿಯೋ ಕಡ್ಡಾಯ: ದೆಹಲಿ ಹೈಕೋರ್ಟ್

newsics.com ನವದೆಹಲಿ: ಪೋಲೀಸ್ ಠಾಣೆಯಲ್ಲಿ ಸಿಸಿಟಿವಿ ವಿಡಿಯೋ ಜೊತೆ ಆಡಿಯೋ ಕೂಡ ಇರಬೇಕೆಂದು ದೆಹಲಿ ಹೈಕೋರ್ಟ್ ಹೇಳಿದೆ. ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಪೋಲೀಸ್ ಠಾಣೆಯ ಎಲ್ಲಾ ಕಡೆಗಳಲ್ಲೂ...

ಎಂ.ಕರುಣಾನಿಧಿ ಕಂಚಿನ ಪ್ರತಿಮೆ ಅನಾವರಣ

newsics.com ಚೆನ್ನೈ: ಐದು ಬಾರಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ.ಕರುಣಾನಿಧಿ ಅವರ 16 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅನಾವರಣಗೊಳಿಸಿದರು. ಈ ಮೊದಲೇ ಪ್ರತಿಮೆ ನಿರ್ಮಿಸಿದ್ದು, ಅದನ್ನು ಧ್ವಂಸಗೊಳಿಸಲಾಗಿತ್ತು. ಅದೇ ಪ್ರತಿಮೆ...

ಜಾಕ್ವೆಲಿನ್ ಫರ್ನಾಂಡಿಸ್‌ಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ

newsics.com ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ ನೀಡಿದೆ. ಸುಖೇಶ್ ಚಂದ್ರಶೇಖರ್ ವಿರುಧ್ದದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸುಖೇಶ್ ಚಂದ್ರಶೇಖರ್ ಅವರೊಂದಿಗೆ ಜಾಕ್ವೆಲಿನ್ ಅವರಿಗೆ...
- Advertisement -
error: Content is protected !!