Wednesday, November 30, 2022

ಭಗ್ನ ಪ್ರೇಮಿಯಿಂದ ಯುವತಿಯ ಬರ್ಬರ ಹತ್ಯೆ, ಸಹೋದರಿ ಮೇಲೆ ಕೂಡ ಹಲ್ಲೆ

Follow Us

newsics.com

ಮಲಪುರಂ: ಕೇರಳದ ಪೆರಿಂದಲ್ ಮನ್ನ ಎಂಬಲ್ಲಿ ಭಗ್ನ ಪ್ರೇಮಿಯೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಯುವತಿಯ ಮನೆಗೆ ನುಗ್ಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಮೃತಪಟ್ಟ ಯುವತಿಯನ್ನು  ದೃಶ್ಯ ಎಂದು ಗುರುತಿಸಲಾಗಿದೆ. ಚೂರಿ ಇರಿತದಿಂದ ದೃಶ್ಯ ಸಾವನ್ನಪ್ಪಿದ್ದಾಳೆ. ಅಕ್ಕನನ್ನು ರಕ್ಷಿಸಲು ಬಂದ ತಂಗಿ  ದೇವ ಶ್ರೀ ಮೇಲೆ ಕೂಡ ಆರೋಪಿ ಹಲ್ಲೆ ನಡೆಸಿದ್ದಾನೆ.

ಆರೋಪಿಯನ್ನು ವಿನೀಶ್ ವಿನೋದ್ ಎಂದು ಗುರುತಿಸಲಾಗಿದೆ. ತನ್ನನ್ನು ಪ್ರೀತಿಸುವಂತೆ ವಿನೀಶ್, ಯುವತಿ ದೃಶ್ಯಳನ್ನು ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಆತನ  ಪ್ರೇಮ ಪ್ರಸ್ತಾಪವನ್ನು ದೃಶ್ಯ ನಿರಾಕರಿಸಿದ್ದಳು.

ಇದರಿಂದ  ಹತಾಶನಾದ ವಿನೀಶ್ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ದೃಶ್ಯ ಅವರ ತಂದೆಯ ಅಂಗಡಿಗೆ ಬೆಂಕಿ ಹಚ್ಚಲಾಗಿದ್ದು, ಇದು ಕೂಡ ವಿನೀಶ್ ಕೃತ್ಯ ಎಂಬ ಶಂಕೆ ಮೂಡಿದೆ

ಚಿಕನ್ ಬಿರಿಯಾನಿಯಲ್ಲಿ ಕಡಿಮೆ ಚಿಕನ್ ನೀಡಿದ್ದಕ್ಕೆ ಹೊಡೆದಾಟ

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!