Saturday, April 17, 2021

200 ನಗರಗಳಲ್ಲಿ ‘ಜಿಯೋ ಮಾರ್ಟ್​​’ ಆನ್​ಲೈನ್ ಸೇವೆ ಶೀಘ್ರ

ಮುಂಬೈ: ರಿಲಯನ್ಸ್​​ ಇಂಡಸ್ಟ್ರೀಸ್​ ಎಲ್​ಟಿಡಿ (ಆರ್​ಐಎಲ್​)ನಿಂದ ಆನ್​ಲೈನ್​ನಲ್ಲಿ ಕಿರಾಣಿ ವಸ್ತುಗಳನ್ನು ಒದಗಿಸುವ ಸೇವೆ ‘ಜಿಯೋ ಮಾರ್ಟ್​​’ ಪ್ರಾರಂಭವಾಗಿದೆ.
ರಿಲಯನ್ಸ್​ ಸ್ಮಾರ್ಟ್​ನ ಸಿಇಒ ದಾಮೋದರ್ ಮಾಲ್​ ಅವರು ಜಿಯೋ ಮಾರ್ಟ್​ ಪ್ರಾರಂಭವಾದ ಬಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಸದ್ಯ ಮುಂಬೈ ಕೆಲ ಭಾಗಗಳಿಗೆ ಮಾತ್ರ ಸೀಮಿತವಾಗಿರುವ ಜಿಯೋ ಮಾರ್ಟ್​ ತನ್ನ ಸೇವೆಯನ್ನು ದೇಶದ 200 ನಗರಗಳಲ್ಲಿ ಶೀಘ್ರವೇ ಪ್ರಾರಂಭ ಮಾಡಲಿದೆ ಎಂದೂ ತಿಳಿಸಿದ್ದಾರೆ.
ದಾಮೋದರ್ ಮಾಲ್​ ಅವರ ಟ್ವೀಟ್ ಹೊರತುಪಡಿಸಿ ಇದುವರೆಗೂ ಮುಂಬೈನಲ್ಲಿರುವ ರಿಲಯನ್ಸ್​ ಪ್ರಧಾನ ಕಚೇರಿಯಿಂದ ಜಿಯೋ ಮಾರ್ಟ್​ ಪ್ರಾರಂಭದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ದೇಶದಲ್ಲಿ ಸದ್ಯ ವಿದೇಶಿ ಇ-ಕಾಮರ್ಸ್​ ಸಂಸ್ಥೆಗಳಾದ ಅಮೇಜಾನ್​, ಫ್ಲಿಪ್​ಕಾರ್ಟ್​ಗಳು ಮುಂಚೂಣಿಯಲ್ಲಿದ್ದು, ಅಗತ್ಯ ದಿನಸಿ ವಸ್ತುಗಳನ್ನು ಆನ್​ಲೈನ್ ಮೂಲಕ ಪೂರೈಸುತ್ತಿವೆ. ಇದೀಗ ಜಿಯೋ ಮಾರ್ಟ್​ ಆನ್​ಲೈನ್ ಸರ್ವೀಸ್ ಪ್ರಾರಂಭವಾಗಿದ್ದು ಮಹತ್ವದ ಬೆಳವಣಿಗೆ ಎನಿಸಿದೆ. ಜಿಯೋ ಮಾರ್ಟ್​ನಲ್ಲಿ ದಿನಸಿ ವಸ್ತುಗಳು ಸೇರಿ ಎಲ್ಲ ಅಗತ್ಯ ವಸ್ತುಗಳೂ ಆನ್​ಲೈನ್​ ಮೂಲಕ ಲಭ್ಯವಾಗಲಿವೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!