ರಾಂಚಿ: ಜಾರ್ಖಂಡ್ ನಲ್ಲಿ ಜೆಎಂಎಂ- ಕಾಂಗ್ರೆಸ್ ಮೈತ್ರಿ ಆಡಳಿತ ಬಹುತೇಕ ಖಚಿತವಾಗಿದೆ.
ಚುನಾವಣಾ ಮತ ಎಣಿಕೆಯ ಬಹುತೇಕ ಸುತ್ತುಗಳು ಮುಕ್ತಾಯವಾಗಿದ್ದು ಇಲ್ಲಿಯವರೆಗೆ ಜೆಎಂಎಂ- ಕಾಂಗ್ರೆಸ್ ಮೈತ್ರಿ 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 24ರಲ್ಲಿ ಮುಂದಿದೆ.
ಜೆಎಂಎಂ-ಕಾಂಗ್ರೆಸ್ ಮೈತ್ರಿಯಲ್ಲಿ ಜೆಎಂಎಂ 29 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು ದೊಡ್ಡ ಪಕ್ಷವೆನಿಸಿದೆ. ಕಾಂಗ್ರೆಸ್ 14ರಲ್ಲಿ ಮಾತ್ರ ತನ್ನ ಪ್ರಭುತ್ವ ಸಾಧಿಸಿದೆ. ಹೀಗಾಗಿ ಜೆಎಂಎಂ ಮುಖ್ಯಸ್ಥ ಹೇಮಂತ್ ಸೊರೇನ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ.
ಗೆಲುವು ನಿಶ್ಚಿತ ಎಂದು ತಿಳಿಯುತ್ತಲೇ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಹೇಮಂತ್ ಸೊರೇನ್ ಅವರು ತಮ್ಮ ತಂದೆ, ಜಾರ್ಖಂಡ ಮುಕ್ತಿ ಮೋರ್ಚಾ (ಜೆಎಂಎಂ) ಸಂಸ್ಥಾಪಕ ಸಿಬು ಸೊರೇನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಹೇಮಂತ್ ಸೊರೇನ್ ಅವರು ಜಾರ್ಖಂಡದ ಐದನೇ ಮುಖ್ಯಮಂತ್ರಿಯಾಗಿ 2013ರಲ್ಲಿ ಪ್ರಮಾಣವಚನ ಸ್ವೀಕರಿಸಿ 2014ರವರೆಗೆ ಆಡಳಿತ ನಡೆಸಿದ್ದರು.
ಜಾರ್ಖಂಡ್: ಜೆಎಂಎಂ-ಕಾಂಗ್ರೆಸ್ ಮೈತ್ರಿ ಆಡಳಿತ ಬಹುತೇಕ ಖಚಿತ
Follow Us